ಬಾಗಲಕೋಟೆಯಲ್ಲಿಂದು 14 ಜನ ಗುಣಮುಖ

314

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಜಿಲ್ಲೆಯಲ್ಲಿ ಕರೋನಾದಿಂದ ಇಂದು 14 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದು, ಶನಿವಾರ ಸಂಜೆ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು 137 ಜನ ಗುಣಮುಖರಾಗಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಬೀಳಗಿ ತಾಲೂಕಿನ ಡವಳೇಶ್ವರ ಗ್ರಾಮದ 25 ವರ್ಷದ ಯುವತಿ ಪಿ-7952, ಮುಧೋಳನ ಬಾಲಗರಗಲ್ಲಿಯ 6 ವರ್ಷದ ಬಾಲಕಿ ಪಿ-8701, ಬಾದಾಯಿಯ ಮಂಜುನಾಥ ನಗರದ 54 ವರ್ಷದ ಪುರುಷ ಪಿ-9153, ಗುಳೇದಗುಡ್ಡದ 25 ವರ್ಷದ ಯುವಕ ಪಿ-9155, ಕಲಾದಗಿ ಗ್ರಾಮದ ಪಿ-32 ವರ್ಷದ ಪುರುಷ ಪಿ-10158, 33 ವರ್ಷದ ಪುರುಷ ಪಿ-10159, 51 ವರ್ಷದ ಪುರುಷ ಪಿ-10160, 40 ವರ್ಷದ ಮಹಿಳೆ ಪಿ-10157, 20 ವರ್ಷದ ಯುವಕ ಪಿ-10168, ಇನ್ನು ಬನಹಟ್ಟಿಯ 28 ವರ್ಷದ  ಯುವತಿ ಪಿ-10161, ಮುಧೋಳನ 19 ವರ್ಷದ ಯುವತಿ ಪಿ-10169, ಕಲಾದಗಿಯ 29 ವರ್ಷದ ಯುವಕ ಪಿ-8300, 50 ವರ್ಷದ ಮಹಿಳೆ ಪಿ-8709, ಮುಧೋಳನ 36 ವರ್ಷದ ಮಹಿಳೆ ಪಿ-8702 ಕೋವಿಡನಿಂದ ಗುಣಮುಖರಾದವರು.

ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 226 ಪಾಜಿಟಿವ್ ಪ್ರಕರಣಗಳು ದೃಡಪಟ್ಟಿವೆ. ಈ ಪೈಕಿ 105 ಗ್ರಾಮೀಣ ಹಾಗೂ 121 ನಗರ ಪ್ರದೇಶದಲ್ಲಿ ಕಂಡುಬಂದಿವೆ. ಬಾಗಲಕೋಟೆ ತಾಲೂಕಿನಲ್ಲಿ 83, ಬಾದಾಮಿ 44, ಬೀಳಗಿ 7, ಜಮಖಂಡಿ 27, ಮುಧೋಳ 60 ಹಾಗೂ ಹುನಗುಂದ ತಾಲೂಕಿನಲ್ಲಿ 5 ಪ್ರಕರಣಗಳು ಕಂಡುಬಂದಿವೆ. ಈ ಪೈಕಿ 137 ಜನ ಬಿಡುಗಡೆ ಹೊಂದಿದ್ದು, 84 ಜನ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ಯಾಪ್ಟನ್ ಡಾ.ಕೆ ರಾಜೇಂದ್ರ, ಜಿಲ್ಲಾಧಿಕಾರಿ

ಜಿಲ್ಲೆಯಿಂದ ಜೂನ್ 29 ರಂದು ಕಳುಹಿಸಲಾದ 281 ಸ್ಯಾಂಪಲ್‍ಗಳ ಪೈಕಿ 55 ಮತ್ತು ಜಿಲ್ಲಾ ಕೋವಿಡ್ ಲ್ಯಾಬ್‍ನಲ್ಲಿ ಪರೀಕ್ಷಿಸಲಾದ 42 ಸ್ಯಾಂಪಲ್‍ಗಳು ಸೇರಿ ಒಟ್ಟು 97 ಸ್ಯಾಂಪಲ್‍ಗಳ ವರದಿ ನೆಗಟಿವ್ ಬಂದಿರುತ್ತವೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 1,538 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜೂನ್ 20 ರಂದು 62 ಸ್ಯಾಂಪಲ್, 21 ರಂದು 8, 24 ರಂದು 152, 27 ರಂದು 12, 29 ರಂದು 226, ಜುಲೈ 1 ರಂದು 320, 2 ರಂದು 395, 3 ರಂದು 359 ಜಿಲ್ಲಾ ಕೋವಿಡ್ ಲ್ಯಾಬ್‍ನಲ್ಲಿ 4 ಸೇರಿದಂತೆ ಒಟ್ಟು 1,538 ಸ್ಯಾಂಪಲ್‍ಗಳ ವರದಿ ಬಾಕಿ ಉಳಿದಿವೆ.




Leave a Reply

Your email address will not be published. Required fields are marked *

error: Content is protected !!