ಯಾವ ಕಾಯ್ದೆಯಡಿ ಪುರಸಭೆ ಕೆಇಬಿಗೆ ನೋಟಿಸ್ ಕೊಡಬಹುದು? ಇಲ್ಲಿ ಯಾರ ತಪ್ಪಿದೆ?

441

ಪ್ರಜಾಸ್ತ್ರ ವಿಶೇಷ ವರದಿ, ಭಾಗ-6

ಸಿಂದಗಿ: ಪಟ್ಟಣದ ಅನಧಿಕೃತ ಅಂಗಡಿಗಳನ್ನ ತೆರವುಗೊಳಿಸಲು ಪುರಸಭೆ ಸಮಯ ಬೇಕು ಅಂತಿದೆ. ಕೆಇಬಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಸಂಬಂಧಪಟ್ಟ ಎಇಇ ನಾನು ಅಧಿಕಾರಕ್ಕೆ ಬರುವ ಮೊದಲು ಇದೆಲ್ಲ ಆಗಿದೆ. ನಾನು ಬಂದ್ಮೇಲೆ ಅಲ್ಲವೆಂದು ಕೈತೊಳೆದುಕೊಳ್ತಿದ್ದಾರೆ.

ಪುರಸಭೆ ಈ ಬಗ್ಗೆ ಮೊದ್ಲೇ ಕ್ರಮ ತೆಗೆದುಕೊಂಡಿಲ್ಲ. ನಂತರ ವಿದ್ಯುತ್ ಸಂಪರ್ಕ ಪಡೆಯುತ್ತಿದ್ರೂ ಕೆಇಬಿ ಸೈಲೆಂಟ್ ಆಗಿದೆ. ತಾಲೂಕು ಆಡಳಿತ ಕಚೇರಿ(ಕಾಂಪೌಂಡ್ ಒಡೆದು ಜಾಗ ಮಾಡಿಕೊಳ್ತಿದ್ರೂ ಮೌನವಾಗಿದೆ!), ಕೋರ್ಟ್ ಎದುರು, ತಾಲೂಕು ಆಸ್ಪತ್ರೆ ಹೀಗೆ ಎಲ್ಲೆಡೆ ಅನಧಿಕೃತ ಅಂಗಡಿಗಳು ತೆಲೆ ಎತ್ತಿದ್ರೂ ಕ್ರಮಕ್ಕೆ ಮುಂದಾಗಿಲ್ಲ.

ಪುರಸಭೆ ನೋ ಅಬ್ ಜಕ್ಷನ್ ಸರ್ಟಿಫಿಕೇಟ್ ಕ್ಯಾನ್ಸಲ್ ಮಾಡಿದ್ರೆ ವಿದ್ಯುತ್ ಸಂಪರ್ಕ ಸಿಗಲ್ಲ. ಈ ಬಗ್ಗೆ ನೋಟಿಸ್ ಸಹ ನೀಡಬಹುದು. 1964ರ ಪುರಸಭೆ ಕಾಯ್ದೆ ಅಡಿಯಲ್ಲಿ ನೋಟಿಸ್ ನೀಡಲು ಅವಕಾಶವಿದೆ. ಪುರಸಭೆ ಕಾಯ್ದೆಯ ಕಲಂ 256, 257 ಅಡಿಯಲ್ಲಿ ಅಂಗಡಿಕಾರರಿಗೆ ಲೈಸನ್ಸ್ ಸಂಬಂಧ ನೋಟಿಸ್ ನೀಡಲು ಬರುತ್ತೆ. ಕಾಯ್ದೆ 374 ಅಡಿಯಲ್ಲಿ ಕೆಇಬಿಗೆ ನೋಟಿಸ್ ನೀಡಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ತಿಳಿಸಬಹುದು. ಅಂದ್ರೆ, ಎನ್ಒಸಿ ರದ್ದು ಮಾಡಿದ್ಮೇಲೆ ಕೆಇಬಿದವರು ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಗುತ್ತೆ.

ಈಗಾಗ್ಲೇ ನಾವು ಆಲಮೇಲದಲ್ಲಿ ಅನಧಿಕೃತ ಅಂಗಡಿಗಳನ್ನ ತೆರವುಗೊಳಿಸುವ ಕೆಲಸ ಮಾಡ್ತಿದ್ದೇವೆ. ಇಲ್ಲಿ ಒಂದು ಎರಡು ಅಂಗಡಿ ತೆರವುಗೊಳಿಸಲು ಆಗಲ್ಲ. ಪಟ್ಟಣದ ಎಲ್ಲ ಕಡೆ ಅನಧಿಕೃತ ಅಂಗಡಿಗಳನ್ನ ಆದಷ್ಟು ಬೇಗ ತೆರವುಗೊಳಿಸುತ್ತೇವೆ.

ಸುರೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ, ಸಿಂದಗಿ

ಇಷ್ಟೆಲ್ಲ ಅವಕಾಶಗಳು ಇದ್ರೂ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಲು ಹಿಂದೇಟು ಹಾಕಲು ಕಾರಣ, ಇಲಾಖೆಯವರು ಒಂದಾಗಿ ಇರದೆ ಇರೋದು. ತಾಲೂಕು ಆಡಳಿತ, ಪುರಸಭೆ, ಕೆಇಬಿ ಇಲಾಖೆ ಸೇರಿ ಸರಿಯಾದ ಕ್ರಮವನ್ನ ತೆಗೆದುಕೊಂಡ್ರೆ ಕೋರ್ಟ್ ಗೆ ಹೋದ್ರೂ ಸಾಧ್ಯವಿಲ್ಲ. ಯಾಕಂದ್ರೆ, ಅವರು ಇರುವುದೇ ಅನಧಿಕೃತ ಜಾಗದಲ್ಲಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗ್ಲಾದ್ರೂ ಸಂಬಂಧಪಟ್ಟವರು ಈ ಬಗ್ಗೆ ಅನಧಿಕೃತ ಜಾಗದಲ್ಲಿರುವವರಿಗೆ ಕಾಲಾವಕಾಶ ನೀಡಿ, ಸ್ವಯಂಕೃತವಾಗಿ ಖಾಲಿ ಮಾಡಲು ಹೇಳಬೇಕು. ಇಲ್ದೇ ಹೋದ್ರೆ ಕಾನೂನು ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು. ಯಾಕಂದ್ರೆ, ಕಾನೂನು ಮಂದೆ ಯಾರೂ ದೊಡ್ಡವರಲ್ಲ. ಎಲ್ಲರೂ ತೆಲೆ ಬಾಗಲೇಬೇಕು.

ವಿಶೇಷ ವರದಿ ಮುಂದುವರೆಯುತ್ತೆ…




Leave a Reply

Your email address will not be published. Required fields are marked *

error: Content is protected !!