ಆಗಸ್ಟ್ ಹೊತ್ತಿಗೆ ರಾಜ್ಯದಲ್ಲಿ 25 ಸಾವಿರ ಜನರಲ್ಲಿ ಸೋಂಕು!

327

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಸೋಂಕು ವಿಚಾರದಲ್ಲಿ ಜನರನ್ನ ಎಚ್ಚೆತ್ತುಕೊಳ್ಳಿ ಎಚ್ಚೆತ್ತುಕೊಳ್ಳಿ ಅಂದ್ರೆ ಕ್ಯಾರೆ ಅಂತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಏರಿಕೆಯಾಗ್ತಿದೆ. ದಿನಕ್ಕೆ ಶೇಕಡ 4ರಷ್ಟು ಸೋಂಕು ಏರಿಕೆ ಕಾಣ್ತಿದೆಯಂತೆ.

ರಾಜ್ಯದಲ್ಲಿ ಆಗಸ್ಟ್ 15ರ ಹೊತ್ತಿಗೆ 25 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೇಕಡ 3ರಷ್ಟು ಸೋಂಕು ಇದ್ರೆ 17 ಸಾವಿರ. ಶೇಕಡ 4 ಆದ್ರೆ 25 ಸಾವಿರ ಸೋಂಕು ಪ್ರಕರಣ ಎನ್ನಲಾಗ್ತಿದೆ. ಇದರ ಜೊತೆಗೆ ಸಾವಿನ ಸಂಖ್ಯೆ ಸಹ ಏರುತ್ತಲೇ ಇದೆ.

ನಾಡಿನಲ್ಲಿ ಈಗ 9,150 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 5,618 ಜನರು ಗುಣಮುಖರಾಗಿದ್ದಾರೆ. 3,391 ಪ್ರಕರಣಗಳು ಚಾಲ್ತಿಯಲ್ಲಿವೆ. 137 ಜನರು ಸಾವನ್ನಪ್ಪಿದ್ದಾರೆ. 77 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸೇರುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಟೈಸರ್ ಬಳಕೆ ಮಾಡುವುದನ್ನ ಮರೆಯಬಾರದು.




Leave a Reply

Your email address will not be published. Required fields are marked *

error: Content is protected !!