11 ಸಾವಿರ ದಾಟಿದ ಸೋಂಕು..

315

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 445 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಯಲ್ಲಿ ಇಷ್ಟೊಂದು ಸೋಂಕು ಪತ್ತೆಯಾಗಿದ್ದು, 11005ಕ್ಕೆ ಏರಿಕೆಯಾಗಿದೆ. ಇನ್ನು ಕೋವಿಡ್ 19ಗೆ 10 ಮಂದಿ ಬಲಿಯಾಗಿದ್ದಾರೆ. ಬೆಂಗಳೂರು ನಗರ 3, ಕಲಬುರಗಿ, ಬಳ್ಳಾರಿ, ಬೀದರ, ಬಾಗಲಕೋಟೆ, ಶಿವಮೊಗ್ಗ, ಧಾರವಾಡ, ಕೋಲಾರದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು,ಇದುವರೆಗೂ 180 ಜನರು ಬಲಿಯಾಗಿದ್ದಾರೆ.

ರಾಜ್ಯದಲ್ಲಿ 246 ಜನರು ಡಿಸ್ಚಾರ್ಜ್ ಆಗಿದ್ದು, 6,910 ಜನರು ಗುಣಮುಖರಾಗಿದ್ದಾರೆ. 3,905 ಪ್ರಕರಣಗಳು ಚಾಲ್ತಿಯಲ್ಲಿವೆ. ಜಿಲ್ಲಾವಾರು ಸೋಂಕಿತರ ವಿವರ ಇಲ್ಲಿದೆ..

ಬೆಂಗಳೂರು ನಗರ 144, ಬಳ್ಳಾರಿ 47, ಕಲಬುರಗಿ 42, ಕೊಪ್ಪಳ 36, ದಕ್ಷಿಣ ಕನ್ನಡ 33, ಧಾರವಾಡ 30, ರಾಯಚೂರು 14, ಗದಗ 12, ಚಾಮರಾಜನಗರ 11, ಉಡುಪಿ 9, ಯಾದಗಿರಿ 7, ಮಂಡ್ಯ 6, ಬಾಗಲಕೋಟೆ 6, ಶಿವಮೊಗ್ಗ 6, ಕೋಲಾರ 6, ಉತ್ತರ ಕನ್ನಡ 6, ಮೈಸೂರು 5, ಚಿಕ್ಕಮಗಳುರು 4, ಕೊಡಗು 4, ಹಾಸನ 3, ಬೆಂ.ಗ್ರಾಮಾಂತರ 3, ವಿಜಯಪುರ 2, ತುಮಕೂರು 2, ಹಾವೇರಿ 2, ಬೀದರ 1, ಬೆಳಗಾವಿ 1, ದಾವಣಗೆರೆ 1, ರಾಮನಗರ 1, ಚಿತ್ರದುರ್ಗ 1 ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!