ಕೊಲೆ ಆರೋಪಿಗೆ ಕೋವಿಡ್ 19: ವಿಜಯಪುರದ ಪಿಎಸ್ಐ ಸೇರಿ 6 ಜನ ಕ್ವಾರಂಟೈನ್

325

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜೂನ್ 20ರಂದು ನಗರದ ಎನ್ ಹೆಚ್ 50 ಆಲಮೇಲ ರೋಡ್ ಹತ್ತಿರ 20 ವರ್ಷದ ಯುವಕನನ್ನ ನಾಲ್ವರು ಸೇರಿ ಕೊಲೆ ಮಾಡಿದ್ರು. ಈ ಸಂಬಂಧ ಮೂವರನ್ನ ಬಂಧಿಸಲಾಗಿತ್ತು. ಇದರಲ್ಲಿ ಈಗ ಓರ್ವನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಆರೋಪಿ ನಂಬರ್ 3ನನ್ನ ಜೂನ್ 25ರಂದು ಬಂಧಿಸಿ, ಕರೋನಾ ಟೆಸ್ಟ್ ಮಾಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಲ್ದೇ, ಆತನನ್ನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ಈಗ ಈತನಿಗೆ ಇಂದು ಸೋಂಕು ದೃಢಪಟ್ಟಿದೆ. ಹೀಗಾಗಿ ಜಲನಗರ ಠಾಣೆ ಪಿಎಸ್ಐ ಸೇರಿ 6 ಜನರನ್ನ ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!