ಕಿಂಗ್ ಕೊಹ್ಲಿ 500ನೇ ಪಂದ್ಯದ ದಾಖಲೆ

139

ಪ್ರಜಾಸ್ತ್ರ ಕ್ರೀಡಾ ಸುದ್ದಿ

2 ಟೆಸ್ಟ್ ಪಂದ್ಯಗಳ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿರುವ ಭಾರತ ತಂಡಕ್ಕೆ ಗುರುವಾರ ನಡೆಯುತ್ತಿರುವ 2ನೇ ಪಂದ್ಯ ತುಂಬಾ ಮಹತ್ವದ್ದಾಗಿದೆ. ಒಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಇದು 100ನೇ ಟೆಸ್ಟ್ ಪಂದ್ಯ. ಇನ್ನೊಂದು ಸರ್ವಕಾಲಿಕ ಶ್ರೇಷ್ಠಗಾರ ಟೀಂ ಇಂಡಿಯಾದ ಕಿಂಗ್ ಕೊಹ್ಲಿಯ 500ನೇ ಪಂದ್ಯವಾಗಿದೆ.

ಹೌದು, ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ ಹಾಗೂ ಟಿ-20 ಮಾದರಿಯ ಪಂದ್ಯಗಳಲ್ಲಿ ಸೇರಿ 500 ಪಂದ್ಯಗಳನ್ನು ಆಡಿದ್ದಾರೆ. ಈ ಮೂಲಕ ಭಾರತದ 4ನೇ ಆಟಗಾರರ ಈ ಸಾಧನೆ ಮಾಡಿದ ಗರಿಮೆ ಹೊಂದಿದ್ದಾರೆ. 2008ರಲ್ಲಿ ಟೀಂ ಇಂಡಿಯಾಗೆ ಎಂಟ್ರಿ ಪಡೆದ ವಿರಾಟ್ ಕೊಹ್ಲಿ ಇದುವರೆಗೂ ಹತ್ತು ಹಲವು ದಾಖಲೆಗಳನ್ನು ಮುರಿದು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವಾಡಿದ 10 ಆಟಗಾರರ ಪಟ್ಟಿ

ಸಚಿನ್ ತಂಡೂಲ್ಕರ್-664(ಭಾರತ), ಮಹೆಲ್ ಜಯವರ್ಧನ್-652(ಶ್ರೀಲಂಕಾ), ಕುಮಾರ್ ಸಂಗ್ಕಾರ್-594(ಶ್ರೀಲಂಕಾ), ಸನತ್ ಜಯಸೂರ್ಯ-586(ಶ್ರೀಲಂಕಾ), ರಿಕಿ ಪಾಂಟಿಂಗ್-560(ಆಸ್ಟ್ರೇಲಿಯಾ), ಎಂ.ಎಸ್ ಧೋನಿ-538(ಭಾರತ), ಶಾಹಿದ್ ಆಫ್ರಿದಿ-524(ಪಾಕಿಸ್ತಾನ), ಜಾಕಾಸ್ ಕಾಲಿಸ್-519(ದಕ್ಷಿಣ ಆಫ್ರಿಕಾ), ರಾಹುಲ್ ದ್ರಾವಿಡ್-509(ಭಾರತ), ವಿರಾಟ್ ಕೊಹ್ಲಿ-500(ಭಾರತ)

110 ಟೆಸ್ಟ್ ಪಂದ್ಯಗಳಿಂದ 8,555 ರನ್ ಗಳಿಸಿದ್ದಾರೆ. ಇದರಲ್ಲಿ 7 ದ್ವಿಶತಕ, 28 ಶತಕ, 29 ಅರ್ಧ ಶತಕಗಳಿವೆ. 275 ಏಕದಿನ ಪಂದ್ಯಗಳನ್ನು ಆಡಿದ್ದು, 12,898 ರನ್ ಬಾರಿಸಿದ್ದಾರೆ. ಇದರಲ್ಲಿ 46 ಶತಕ, 65 ಅರ್ಧ ಶತಕಗಳಿವೆ. ಇನ್ನು ಟಿ-20 ಮಾದರಿಯಲ್ಲಿ 115 ಪಂದ್ಯಗಳಿಂದ 4008 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 37 ಅರ್ಧ ಶತಕಗಳಿವೆ. 34 ವರ್ಷದ ವಿರಾಟ್ ಕೊಹ್ಲಿ ರನ್ ಮಷಿನ್ ಎಂದೇ ಖ್ಯಾತಿ ಗಳಿಸಿದ್ದಾರೆ. ವಿಶ್ವ ಕ್ರಿಕೆಟ್ ಅಂಗಳದ ದಿಗ್ಗಜರ ದಾಖಲೆಗಳನ್ನು ಉಡೀಸ್ ಮಾಡುತ್ತಲೇ ಬರುತ್ತಿರುವ ಕೊಹ್ಲಿ ಬ್ಯಾಟಿನಿಂದ ಮತ್ತಷ್ಟು ರನ್ ಹೊಳೆ ಹರಿಯುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!