‘ಹಾಸ್ಟೆಲ್ ಹುಡುಗರಿಗೆ’ ಜಯ.. ರಮ್ಯಾಗೆ ಟಾಂಗ್

233

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹೊಸಬರು ಕೂಡಿಕೊಂಡು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಅನ್ನೋ ಸಿನಿಮಾ ನಿರ್ಮಿಸಿದ್ದಾರೆ. ಇದರಲ್ಲಿ ಹಲವು ಸ್ಟಾರ್ ನಟರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೆ ರೀತಿ ನಟಿ, ಮಾಜಿ ಸಂಸದೆ ರಮ್ಯಾ ಸಹ ಕಾಣಿಸಿಕೊಂಡಿದ್ದಾರೆ. ಆದರೆ, ಅದೇನಾಗಿದೆಯೋ ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ನಲ್ಲಿನ ತಮ್ಮ ದೃಶ್ಯ ತೆಗೆಯಬೇಕು. ತಮಗೆ 1 ಕೋಟಿ ಪರಿಹಾರ ನೀಡಬೇಕು ಎಂದು ಕೇಸ್ ಹಾಕಿದ್ದರು.

ಕೋರ್ಟ್ ರಮ್ಯಾ ದೃಶ್ಯಗಳಿಗೆ ಕತ್ತರಿ ಹಾಕದೆ ಸಿನಿಮಾ ಬಿಡುಗಡೆ ಮಾಡಬಹುದು ಎಂದಿದೆ. ಹೀಗಾಗಿ ಇಂದು ಎಲ್ಲೆಡೆ ಸಿನಿಮಾ ರಿಲೀಸ್ ಆಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಪರಂಪಾವ್ ಸ್ಟುಡಿಯೂ ಅಡಿ ಈ ಚಿತ್ರ ನಿರ್ಮಾಣವಾಗಿದೆ.

ಇಂದು ಮುಂಜಾನೆ ಚಿತ್ರದಲ್ಲಿ ನಟಿಸಿದ ಹುಡುಗರು ಥಿಯೇಟರ್ ನಲ್ಲಿ ಸಿನಿಮಾ ವಿಕ್ಷಿಸಿದರು. ಕೋರ್ಟ್ ನಲ್ಲಿ ತಮಗೆ ನ್ಯಾಯ ಸಿಕ್ಕಿದ್ದಕ್ಕೆ ಸಂತಸ ಪಟ್ಟರು. ನಂತರ ನಟ ಡಾ.ರಾಜಕುಮಾರ್ ನಟನೆಯ ಬಹದ್ಧೂರ್ ಚಿತ್ರದ ಮುತ್ತಿನಂಥ ಮಾತೊಂದು ಗೊತ್ತೇನಮ್ಮ ಎನ್ನುವ ಹಾಡುವ ಹಾಡುವ ಮೂಲಕ ನಟಿ ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!