ಭಾರತ-ವೆಸ್ಟ್ ಇಂಡೀಸ್ ನಡುವೆ ಐತಿಹಾಸಿಕ 100ನೇ ಟೆಸ್ಟ್ ಪಂದ್ಯ

117

ಪ್ರಜಾಸ್ತ್ರ ಕ್ರೀಡಾ ಸುದ್ದಿ

2 ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಮೊದಲ ಪಂದ್ಯವನ್ನು 141 ರನ್ ಗಳಿಂದ ಜಯಿಸಿ 1-0 ಮುನ್ನಡೆ ಸಾಧಿಸಿದೆ. ಇಂದು ಸಂಜೆ ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ 2ನೇ ಟೆಸ್ಟ್ ಶುರುವಾಗಲಿದೆ. ಇದು ಎರಡು ತಂಡಗಳಿಗೆ ಐತಿಹಾಸಿಕ ಪಂದ್ಯವಾಗಿದೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ 100ನೇ ಟೆಸ್ಟ್ ಪಂದ್ಯವಿದು. 1948ರಲ್ಲಿ ಮೊದಲ ಬಾರಿಗೆ ಈ ತಂಡಗಳು ಮುಖಾಮುಖಿಯಾದವು. ಅಂದು ದೈತ್ಯ ಆಟಗಾರರನ್ನು ಹೊಂದಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ಜಗತ್ತನ್ನು ಆಳಿತು. ಇಂದು ತಂಡದ ಸ್ಥಿತಿ ದುರ್ಬಲವಾಗಿದೆ. ಭಾರತ ತಂಡ ಬಲಿಷ್ಟವಾಗಿದೆ.

ಇವರೆಗಿನ 99 ಪಂದ್ಯಗಳಲ್ಲಿ ಭಾರತ 23ರಲ್ಲಿ ಗೆದ್ದಿದೆ. ವೆಸ್ಟ್ ಇಂಡೀಸ್ 30ರಲ್ಲಿ ಗೆದ್ದಿದೆ. 46 ಪಂದ್ಯಗಳು ಡ್ರಾ ಆಗಿವೆ. ಈ ಟೆಸ್ಟ್ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿ ರೋಹಿತ್ ಶರ್ಮಾ ಬಳಗವಿದೆ.

ಭಾರತ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಇಂಗ್ಲೆಂಡ್ ವಿರುದ್ಧ ಆಡಿದೆ. 131 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಎದುರಿಸಿದೆ. 107 ಆಸ್ಟ್ರೇಲಿಯಾ. ಇದೀಗ 100ನೇ ಪಂದ್ಯ ವೆಸ್ಟ್ ಇಂಡೀಸ್ ವಿರುದ್ಧ ಆಡುತ್ತಿದೆ. ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ 59, ಶ್ರೀಲಂಕಾ ವಿರುದ್ಧ 46, ದಕ್ಷಿಣ ಆಫ್ರಿಕಾ ವಿರುದ್ಧ 42 ಟೆಸ್ಟ್ ಪಂದ್ಯಗಳನ್ನಾಡಿದೆ.




Leave a Reply

Your email address will not be published. Required fields are marked *

error: Content is protected !!