ಬಿಷನ್ ಸಿಂಗ್ ಬೇಡಿ ದಾಖಲೆ ಮುರಿದ ಜಡೇಜಾ

110

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಲಂಡನ್: ಓವೆಲ್ ನಲ್ಲಿ ನಡೆಯುತ್ತಿರುವ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ದಾಖಲೆ ಮಾಡಿದ್ದಾರೆ. ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ವಿಕೆಟ್ ಪಡೆಯುವ ಮೂಲಕ ಬಿಷನ್ ಸಿಂಗ್ ಬೇಡಿ ದಾಖಲೆ ಮುರಿದರು.

ಟೀಂ ಇಂಡಿಯಾ ಮಾಜಿ ಹಿರಿಯ ಆಟಗಾರ ಬಿಷನ್ ಸಿಂಗ್ ಬೇಡಿ 67 ಪಂದ್ಯಗಳಲ್ಲಿ 266 ವಿಕೆಟ್ ಪಡೆದರೆ, ಜಡೇಜಾ 65 ಪಂದ್ಯಗಳಲ್ಲಿ 267 ವಿಕೆಟ್ ಪಡೆದು ಈ ಸಾಧನೆ ಮಾಡಿದರು. ಇನ್ನು 174 ಏಕದಿನ ಪಂದ್ಯಗಳಲ್ಲಿ 191 ವಿಕೆಟ್, 64 ಟಿ-20 ಪಂದ್ಯಗಳಲ್ಲಿ 51 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!