ನನ್ನ ಮುಂದಿನ ಮಕ್ಕಳ ತಾಯಿ ಎಂದು ನಯನತಾರಾ ಫೋಟೋ ಹಾಕಿದ ಡೈರೆಕ್ಟರ್

469

ಚಿತ್ರರಂಗದಲ್ಲಿ ಲವ್, ಬ್ರೇಕಪ್.. ಮದುವೆ, ಡಿವೋರ್ಸ್.. ಇವನ್ ಬಿಟ್ಟು ಅವನು.. ಅವಳ್ ಬಿಟ್ಟು ಇವಳು ಅನ್ನೋದು ಕಾಮನ್. ಹೀಗಾಗಿ ಇಲ್ಲಿ ಶಾಶ್ವತವಾದ ಲವ್, ಮದುವೆ ಉಳಿಯೋದು ತುಂಬಾ ಕಡಿಮೆ. ಇಂಥಾ ಲಿಸ್ಟ್ ನಲ್ಲಿ ಸೌಥ್ ಇಂಡಿಯನ್ ಬ್ಯೂಟಿ ನಯನತಾರಾ ಒಬ್ಬಳು.

ಈ ಮೊದ್ಲು ನಟಿ ನಯನತಾರಾ, ನಟ, ನಿರ್ದೇಶಕ ಪ್ರಭುದೇವ ಜೊತೆ ಓಡಾಡಿದ್ಳು. ಮದ್ವೆ ಆದ್ರು ಅನ್ನೋದು ಸುದ್ದಿ ಆಯ್ತು. ಮುಂದೆ ಅದು ಮುರಿದು ಬಿತ್ತು. ಇದೀಗ ಈ ನಟಿಯ ಹೆಸರು ನಿರ್ದೇಶಕ ವಿಘ್ನೇಶ ಶಿವನ್ ಜೊತೆ ತಳಕು ಹಾಕಿಕೊಂಡಿದೆ. ಇವರಿಬ್ಬರ ಲವ್ವಿ ಡವ್ವಿ ಎಲ್ಲರಿಗೂ ಗೊತ್ತಿದೆ. ನಾನುಂ ರೌಡಿ ಧಾನ್ ಚಿತ್ರದ ಟೈಂನಲ್ಲಿ ಇವರ ನಡುವೆ ಪ್ರೀತಿಯಾಗಿದೆ ಎನ್ನಲಾಗ್ತಿದೆ. ಇವರಿಬ್ಬರು ಒಟ್ಟಿಗೆ ಇರುವ ಫೋಟೋಗಳು ಕಳೆದ 2 ವರ್ಷಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿವೆ. ಇದೀಗ ಅದು ಒಂದು ಸ್ಟೆಪ್ ಮುಂದೆ ಹೋಗಿದೆ.

ನಿರ್ದೇಶಕ ವಿಘ್ನೇಶ ಶಿವನ್, ಮೇ 10 ಅಮ್ಮಂದಿರ ದಿನಾಚರಣೆ ಪ್ರಯುಕ್ತ ತಮ್ಮ ತಾಯಿ ಜೊತೆಗಿನ ಫೋಟೋ ಹಾಕಿದ್ರು. ಇದರ ಜೊತೆಗೆ ನಯನತಾರಾ ಮಗುವಾಗಿದ್ದಾಗ ಅವರ ತಾಯಿಯೊಂದಿಗೆ ಇರುವ ಫೋಟೋ ಹಾಕಿ, ಇಂಥಾ ಸುಂದರ ಮಗಳಿಗೆ ಜನ್ಮ ನೀಡಿ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮನ್ನ ನಾವು ತುಂಬಾ ಪ್ರೀತಿಸುತ್ತೇವೆ ಅಮ್ಮ ಎಂದು ಪೋಸ್ಟ್ ಹಾಕಿದ್ದಾರೆ.

ಇದರ ಜೊತೆಗೆ ಕಡಲ ತೀರದಲ್ಲಿ ನಯನತಾರಾ ಮಗುವೊಂದನ್ನ ಎತ್ತಿಕೊಂಡು ಹೋಗ್ತಿರುವ ಫೋಟೋ ಹಾಕಿ, ನನ್ನ ಮುಂದಿನ ಮಕ್ಕಳ ತಾಯಿಯ ಕೈಯಲ್ಲಿರುವ ಮಗುವಿನ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು ಎಂದು ಹಾಕಿ ತಮ್ಮಿಬ್ಬರ ಕಲ್ಯಾಣದ ಬಗ್ಗೆ ಸುಳಿವು ಬಿಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!