ಸಿಂದಗಿಯಲ್ಲಿ ಮತ್ತೆ 13 ಜನರಲ್ಲಿ ಕೋವಿಡ್ 19

625

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಕರೋನಾ ಕಾರ್ಮೋಡ ಮುಂದುವರೆದಿದೆ. ಇಂದು ತಾಲೂಕಿನಲ್ಲಿ ಬರೋಬ್ಬರಿ 13 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 96ಕ್ಕೆ ಏರಿಕೆಯಾಗಿದೆ.

ಪಟ್ಟಣದಲ್ಲಿ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಆರೋಗ್ಯ ಇಲಾಖೆ 2, ಇತರೆ 3.. ಇನ್ನು ಯಂಕಂಚಿ ಗ್ರಾಮದಲ್ಲಿ 5 ಜನರಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ ಆರೋಗ್ಯ ಇಲಾಖೆ 2, ಆಶಾ ಕಾರ್ಯಕರ್ತೆಯರು 3, ಓತಿಹಾಳ 1, ಕೋರವಾರ 1 ಸೇರಿದಂತೆ 13 ಜನರಲ್ಲಿ ಸೋಂಕು ಪ್ರಕರಣಗಳು ದಾಖಲಾಗಿವೆ.

ಪಟ್ಟಣದ ಅಗ್ನಿಶಾಮಕ ಕಚೇರಿ ಹತ್ತಿರವಿರುವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಸೆಂಟರ್ ನಲ್ಲಿದ್ದು, ನಿಗದಿತ ಆಸ್ಪತ್ರೆಗೆ ದಾಖಲು ಮಾಡಲಾಗುವುದು. 3 ಸೋಂಕಿತರು ಈಗಾಗಲೇ ವಿಜಯಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಾಲೂಕ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!