ರಾಜ್ಯದಲ್ಲಿ 80 ಸಾವಿರ ದಾಟಿದ ಸೋಂಕಿತರು

329

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು ಬರೋಬ್ಬರಿ 5 ಸಾವಿರದ ಮೇಲೆ ಕರೋನಾ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಯಲ್ಲಿ 5030 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದ್ರಿಂದಾಗಿ ನಾಡಿನಲ್ಲಿ ಬರೋಬ್ಬರಿ 80,863 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನು 97 ಜನರು ಸಾವನ್ನಪ್ಪುವ ಮೂಲಕ 1,616ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. 2071 ಜನರು ಗುಣಮುಖರಾಗುವುದರೊಂದಿಗೆ 29,310 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 49,931 ಪ್ರಕರಣಗಳು ಚಾಲ್ತಿಯಲ್ಲಿವೆ. ಜಿಲ್ಲಾವಾರು ಸೋಂಕಿತರ ಅಂಕಿಸಂಖ್ಯೆ ಹೀಗಿದೆ..

ಬೆಂಗಳೂರು ನಗರ 2207, ರಾಯಚೂರು 258, ಕಲಬುರಗಿ 229, ದಕ್ಷಿಣ ಕನ್ನಡ 218, ಬೆಳಗಾವಿ 214, ಧಾರವಾಡ 183, ಬಳ್ಳಾರಿ 164, ಬೆಂ.ಗ್ರಾ 161, ಉಡುಪಿ 160, ಮೈಸೂರು 116, ಹಾಸನ 108, ದಾವಣಗೆರೆ 107, ಬಾಗಲಕೋಟೆ 106, ಬೀದರ 94, ಉತ್ತರ ಕನ್ನಡ 83, ಶಿವಮೊಗ್ಗ 82, ಗದಗ 72, ಚಿಕ್ಕಬಳ್ಳಾಪುರ 65, ಚಿಕ್ಕಮಗಳೂರು 62, ತುಮಕೂರು 56, ಯಾದಗಿರಿ 55, ಮಂಡ್ಯ 50, ಕೋಲಾರ 40, ಚಾಮರಾಜನಗರ 27, ರಾಮನಗರ 26, ಕೊಡಗು 22, ವಿಜಯಪುರ 20, ಹಾವೇರಿ 18, ಕೊಪ್ಪಳ 17, ಚಿತ್ರದುರ್ಗ 10 ಸೋಂಕು ಕಾಣಿಸಿಕೊಂಡಿವೆ.

ಬೆಂ.ನ 48, ಮೈಸೂರು 8, ದಕ್ಷಿಣ ಕನ್ನಡ 7, ಬಳ್ಳಾರಿ 5, ಬೆಳಗಾವಿ 4, ಬೀದರ 3, ಚಿಕ್ಕಬಳ್ಳಾಪುರ 3, ಮಂಡ್ಯ 2, ತುಮಕೂರು 2, ಚಿಕ್ಕಮಗಳೂರು 2, ಗದಗ 2, ಶಿವಮೊಗ್ಗ 2, ಹಾಸನ 2, ಧಾರವಾಡ 2, ರಾಯಚೂರು 2, ಹಾವೇರಿ 1, ವಿಜಯಪುರ 1, ರಾಮನಗರ 1 ಸಾವಿನೊಂದಿಗೆ 97 ಜನರು ಮೃತಪಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!