ಸಾವಳಗಿ ಟ್ರಾಫಿಕ್ ಕಿರಿಕಿರಿ ತಪ್ಪೋದ್ಯಾವಾಗ?

648

ಪ್ರಜಾಸ್ತ್ರ ಸುದ್ದಿ, ಕುಮಾರ ಜಾಧವ

ಸಾವಳಗಿ: ಪಟ್ಟಣದ ಶಿವಾಜಿ ಸರ್ಕಲ್ ದಿಂದ ಬಸ್ಟ್ಯಾಂಡ್ ವೃತ್ತದವರೆಗೆ ಪ್ರತಿದಿನ ಟ್ರಾಫಿಕ್ ಕಿರಿಕಿರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇದನ್ನ ಬಗೆಹರಿಸಿ ಎಂದು ಸಾರ್ವನಿಕರು ಒತ್ತಾಯಿಸಿದ್ದಾರೆ.

ಮುಧೋಳ ಹಾಗೂ ಜಮಖಂಡಿ ತಾಲೂಕಿನ ಬಹುತೇಕ ಗ್ರಾಮಗಳಿಗೆ ಗ್ರಾಮದ ಹಾಲಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ಗುಡ್ಡಗಾಡು ಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಬೃಹತ್ ಗಾತ್ರದ ವಾಹನಗಳ ಸಂಚಾರ ಜೋರಾಗಿದೆ.

ಬೃಹತ್ ವಾಹನಗಳು ಹಾಗೂ ಟ್ಯಾಕ್ಟರ್ ಗಳಲ್ಲಿ ಮಿತಿಯಿಲ್ಲದೆ ಘರಸು ತುಂಬಿಕೊಂಡು ಹೋಗುತ್ತಿದ್ದಾರೆ. ರೋಡ್ ಹಂಪ್ಸ್ ಗಳಲ್ಲಿ ಘರಸು ಜಾರಿ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯಿದೆ. ಆದಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

ಆದಿನಾಥ ಸಕಳೆ, ಜಿಲ್ಲಾಧ್ಯಕ್ಷ, ಮಜ್ದೂರ ಕಾಂಗ್ರೆಸ್, ಬಾಗಲಕೋಟ

ಬಹುತೇಕ ಖಾಸಗಿ ವಾಹನಗಳು ಸಂಚಾರಿ ನಿಯಮ ಉಲ್ಲಂಘಿಸಿ, ಅಳತೆ ಮೀರಿ ಮಣ್ಣು ತುಂಬಿಕೊಂಡು ವೇಗದ ಮಿತಿಯಿಲ್ಲದೆ ಸಂಚರಿಸುತ್ತಿವೆ. ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ವಾಹನಗಳು ಸಂಚರಿಸಿದ್ರೂ ಅಧಿಕಾರಿಗಳು ಸುಮ್ಮನಿರುವುದು ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ. ಕೂಡಲೇ ಇದನ್ನ ಬಗೆಹರಿಸಬೇಕಿದೆ.

ಕೋವಿಡ್-19 ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು. ಶೀಘ್ರದಲ್ಲಿ ಟ್ರಾಫಿಕ್ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.

ಎಸ್.ಎಸ್.ಘಾಟಗೆ, ಪಿ.ಎಸ್‍ಐ ಪೊಲೀಸ ಠಾಣೆ ಸಾವಳಗಿ



Leave a Reply

Your email address will not be published. Required fields are marked *

error: Content is protected !!