24 ಗಂಟೆ 49,310 ಸೋಂಕು.. 740 ಸಾವು..

274

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಕರೋನಾ ಸೋಂಕಿನ ಪ್ರಮಾಣ ಅತಿ ವೇಗವಾಗಿ ಹರಡುತ್ತಿದೆ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾಗಿಲ್ಲ. ಯಾಕಂದ್ರೆ, ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಬರೋಬ್ಬರಿ 49,310 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದ್ರಿಂದಾಗಿ 12,87,945 ಜನರಲ್ಲಿ ಇದುವರೆಗೂ ಕೋವಿಡ್ 19 ದೃಢಪಟ್ಟಿದೆ.

ಇನ್ನು 740 ಜನರು ಸಾವನ್ನಪ್ಪುವುದರೊಂದಿಗೆ 30,601ಕ್ಕೆ ಏರಿಕೆ ಕಂಡಿದೆ. 8,17,209 ಜನ ಇದುವರೆಗೂ ಗುಣಮುಖರಾಗಿದ್ದು, 4,40,135 ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ತಿಳಿದು ಬಂದಿದೆ.

ಇದೆ ಮೊದಲ ಬಾರಿಗೆ 49 ಸಾವಿರಕ್ಕೂ ಅಧಿಕ ಸೋಂಕು ಪತ್ತೆಯಾಗಿರುವುದು. ಇದನ್ನ ಗಮನಿಸಿದ್ರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಕಷ್ಟವಾಗಬಹುದು ಎನಿಸ್ತಿದೆ. ಆದ್ರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
Leave a Reply

Your email address will not be published. Required fields are marked *

error: Content is protected !!