‘ಸಿಡಿಸಿ’ ಪಟ್ಟಿಯಲ್ಲಿ ಕರೋನಾದ 6 ಹೊಸ ಲಕ್ಷಣಗಳು

483

ಕರೋನಾ ಇಡೀ ಜಗತ್ತನ್ನು ಎಷ್ಟೊಂದು ಕಾಡುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದನ್ನ ಕಂಟ್ರೋಲ್ ಮಾಡಲು ಔಷಧಿಯ ಅಧ್ಯಯನ ನಡೆಯುತ್ತಲೇ ಇದೆ. ಆದ್ರೂ ಸಾಧ್ಯವಾಗ್ತಿಲ್ಲ. ಇದರ ನಡುವೆ ಸಿಡಿಸಿ( ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ) ಕರೋನಾ ಸೋಂಕಿನ ಹೊಸ ಲಕ್ಷಣಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ.

ಇಷ್ಟು ದಿನ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಈ ಲಕ್ಷಣಗಳನ್ನ ಗುರುತಿಸಲಾಗಿತ್ತು. ಇದೀಗ ಮತ್ತೆ ಕೆಲವು ಹೊಸ ಲಕ್ಷಣಗಳನ್ನ ಗುರುತಿಸಲಾಗಿದೆ. ಸೋಂಕು ಹೆಚ್ಚುತ್ತಿರುವ ಜೊತೆಗೆ ರೋಗ ಲಕ್ಷಣಗಳು ಸಹ ಬೇರೆ ಬೇರೆಯಾಗಿರುವುದು ಕಂಡು ಬಂದಿದೆ ಎಂದು ಹೇಳಲಾಗ್ತಿದೆ.

ಕರೋನಾ ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿಯಲ್ಲಿ ಪದೆಪದೆ ಕೈ ನಡಗುವುದು, ಒಣ ಕೆಮ್ಮು, ಗಂಟಲು ಕೆರೆತ, ಮಾಂಸಖಂಡಗಳಲ್ಲಿ ನೋವು, ರುಚಿಯನ್ನ ಗ್ರಹಿಸುವ ಶಕ್ತಿ ಕಡಿಮೆಯಾಗಿರುವುದು, ತುಟಿ ಮತ್ತು ಮುಖ ನೀಲಿ ಬಣ್ಣವಾಗುವುದು. ಈ 6 ಹೊಸ ಲಕ್ಷಣಗಳನ್ನ ಕೋವಿಡ್ 19 ರೋಗದ ಲಕ್ಷಣಗಳೆಂದು ಸೇರಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!