ಹದ್ದಿನ ಕಾಲಿನಲ್ಲಿ ಅತ್ಯಾಧುನಿಕ ಸೆನ್ಸಾರ್: ವಿಜಯಪುರ ಜಿಲ್ಲೆಯ ಜನರಲ್ಲಿ ಆತಂಕ

610

ವಿಜಯಪುರ: ಗುಮ್ಮಟನಗರಿಯಲ್ಲಿ ಈಗಾಗ್ಲೇ ಕರೋನಾದಿಂದಾಗಿ ಸಾಕಷ್ಟು ಹೈರಾಣಾಗಿದೆ. ಇದರ ನಡುವೆ ಇದೀಗ ಹದ್ದಿನ ಕಾಲಿನಲ್ಲಿ ಅತ್ಯಾಧುನಿಕ ಸೆನ್ಸಾರ್ ಮಾದರಿಯ ಸಲಕರಣೆಗಳು ಕಂಡು ಬಂದಿವೆ. ಇದ್ರಿಂದಾಗಿ ಜನರಲ್ಲಿ ಮತ್ತಷ್ಟು ಆತಂಕ ಮೂಡಿದೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಯಂಬತ್ನಾಳ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಹೊಲಕ್ಕೆ ಹೋದ ರೈತ ಚೋಪ್ಲು ಲಮಾಣಿ ಅವರ ಹೊಲದಲ್ಲಿ ಹದ್ದೊಂದು ಸಾವಿಗೀಡಾಗಿರುವುದನ್ನು ಕಂಡಿದ್ದಾರೆ. ಅದನ್ನ ಹತ್ತಿರದಿಂದ ಹೋಗಿ ನೋಡಿದಾಗ, ಆ ಹದ್ದಿನ ಎರಡೂ ಕಾಲುಗಳಿಗೆ ಕೊಳಹಾಕಲಾಗಿತ್ತು. ಇನ್ನು, ಅದಕ್ಕೆ ಅತ್ಯಾಧುನಿಕ ಸೆನ್ಸಾರ್ ಮಾದರಿಯ ಸಲಕರಣೆಗಳನ್ನ ಕಂಡು ಅವರು ಬೆಚ್ಚಿ ಬಿದ್ದಿದ್ದಾರೆ. ಈ ವಿಷಯವನ್ನು ತನ್ನ ಸ್ನೇಹಿತನಿಗೆ ತಿಳಿಸಿದ್ದು, ಅವರು ಬಂದು ನೋಡಿದಾಗ ಅವರೂ ಕೂಡ ಗಾಬರಿಯಾಗಿದ್ದಾರೆ.

ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದಾದರೂ ವೈಜ್ಞಾನಿಕ ಸಂಶೋಧನೆ ಕೇಂದ್ರದವರು ಈ ಹದ್ದನ್ನು ಪರೀಕ್ಷೆಗಾಗಿ ಹಾರಿ ಬಿಟ್ಟಿದ್ದರಾ? ಈ ಹದ್ದು ಹಾರಾಡಿಕೊಂಡು ನಿತ್ರಾಣವಾಗಿ ಬಂದು ಈ ಹೊಲದಲ್ಲಿ ಬಿದ್ದಿದೆಯಾ ಎಂಬ ಚರ್ಚೆಗೆ ಗ್ರಾಸವಾಗಿದೆ. ಒಟ್ಟಿನಲ್ಲಿ ಹದ್ದಿನ ಕಾಲಿನಲ್ಲಿರುವ ಅತ್ಯಾಧುನಿಕ ವಸ್ತುಗಳು ಹತ್ತು ಹಲವು ಪ್ರಶ್ನೆಗಳನ್ನ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!