ಇಲ್ಲಿನ ಪೌರ ಕಾರ್ಮಿಕರ ಗೋಳು ಕೇಳೋದ್ಯಾರು?

390

ಪಾಂಡವಪುರ: ಪಟ್ಟಣದ ಪುರಸಭೆಯ ಪೌರ ಕಾರ್ಮಿಕರಲ್ಲಿ ಮಹಾಮಾರಿ ಕರೋನಾ ವೈರಾಣು ಹರಡುವ ಭೀತಿ ಎದುರಾಗಿದೆ. ಯಾಕಂದ್ರೆ, ಇವರಿಗೆ ಯಾವುದೇ ರೀತಿಯಿಂದ ಪ್ರಾಥಮಿಕ ವೈದ್ಯಕೀಯ ಸವತ್ತುಗಳು ಇಲ್ಲದೆ ಕೆಲಸ ಮಾಡ್ತಿದ್ದಾರೆ.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಯಾವುದೇ ರಕ್ಷಣೆ ಇಲ್ಲದೆ ತಮ್ಮ ನಿತ್ಯದ ಕೆಲಸದಲ್ಲಿ ಪೌರ ಕಾರ್ಮಿಕರು ತೊಡಗಿಕೊಂಡಿದ್ದಾರೆ. ಕೈಯಲ್ಲಿ ಗ್ಲೌಸ್ ಇಲ್ಲ, ಕಾಲಿಗೆ ಶೂ ಇಲ್ಲ, ಉತ್ತಮ ರೀತಿಯ ಮಾಸ್ಕ್ ಇಲ್ಲ. ಹೀಗೆ ಯಾವುದೇ ಆರೋಗ್ಯ ರಕ್ಷಣಾ ಕಿಟ್ ಇಲ್ಲದೆ ಕೆಲಸ ಮಾಡ್ತಿದ್ದು, ಕರೋನಾ ಸೋಂಕಿನ ಭೀತೆ ಎದುರಾಗಿದೆ.

ಯಾವುದೇ ರಕ್ಷಣೆ ಇಲ್ಲದೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಮಾಧ್ಯಮದವರು ಪ್ರಶ್ನೆ ಮಾಡಿದರೆ, ಪುರಸಭೆಯಿಂದ ಕೊಟ್ಟಿರೋ ಗ್ಲೌಸ್ ವಾರದಲ್ಲೇ ಹರಿದುಹೋಗಿವೆ ಸರ್. ನಂತರ ಇನ್ನೂ ಹೊಸ ಗ್ಲೌಸ್ ಕೊಟ್ಟಿಲ್ಲ. ನಾವೇನು ಮಾಡೋದು ಎಂದು ಸಹಾಯಕತೆ ವ್ಯಕ್ತಪಡಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!