ಉತ್ತರ ಕೋರಿಯಾ ಹುಚ್ಚುದೊರೆಯ ಸಾವು-ಬದುಕಿನ ಸುದ್ದಿ

699

ಪ್ಯೂಂಗ್ಯಾಂಗ್: ಉತ್ತರ ಕೋರಿಯಾದಲ್ಲಿ ಅಧ್ಯಕ್ಷ ಹೇಳಿದ್ದೇ ಕಾನೂನು, ಅವನ ಮಾತೇ ಶಾಸನ. ಇಡೀ ವಿಶ್ವ ಒಂದ್ಕಡೆ ಹೊರಟರೆ, ಉತ್ತರ ಕೋರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಇನ್ನೊಂದ್ಕಡೆ ಹೋಗ್ತಾನೆ. ಹೀಗಾಗಿಯೇ ಈತನನ್ನ ಹುಚ್ಚುದೊರೆ ಎಂದೆ ಕರೆಯಲಾಗುತ್ತೆ.

ಉತ್ತರ ಕೋರಿಯಾದ ಸರ್ವಾಧಿಕಾರಿಯ ಸಾವು ಬದುಕಿನ ಸುದ್ದಿ ಕಳೆದೊಂದು ವಾರದಿಂದ ಭರ್ಜರಿಯಾಗಿ ಚರ್ಚೆಯಾಗ್ತಿದೆ. ಆದ್ರೆ, ಎಲ್ಲಿಯೂ ಇದು ಸ್ಪಷ್ಟವಾಗಿಲ್ಲ. ಕಿಮ್ ಜಾಂಗ್ ಉನ್ ಸತ್ತಿದ್ದಾನೆ ಅನ್ನೋದಾಗ್ಲಿ, ಬದುಕಿದ್ದಾನೆ ಅನ್ನೋದಾಗ್ಲಿ ಯಾವುದೇ ಸ್ಪಷ್ಟವಾಗಿಲ್ಲ. ಯಾಕಂದ್ರೆ, ಇಲ್ಲಿಂದ ಸುದ್ದಿ ಹೊರ ಜಗತ್ತಿಗೆ ಸಿಗುವುದು ಅತ್ಯಂತ ಕಠಿಣ.

ಕೆಲ ದಿನಗಳಿಂದ ಕಿಮ್ ಜಾಂಗ್ ಉನ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗ್ತಿದೆ. ಅಲ್ದೇ, ಆತನ ಬ್ರೇನ್ ಡೆಡ್ ಆಗಿ ಮೃತಪಟ್ಟಿದ್ದಾನೆ ಅಂತಾನೂ ಹೇಳಲಾಗುತ್ತೆ. ಆದ್ರೆ, ನಿಖರತೆ ಮಾತ್ರವಿಲ್ಲ. ರಕ್ಷಸ ಗುಣದ, ನಿರಂಕುಶಮತಿ, ದುಷ್ಟ, ಅಣುವಸ್ತ್ರಗಳಿಂದ ಬಲಿಷ್ಟ ರಾಷ್ಟ್ರಗಳನ್ನೇ ಹೆದರಿಸುತ್ತಿರುವ ಡಿಕ್ಟೇಟರ್ ಅಂತ್ಯವಾಗಿದ್ಯಾ ಇಲ್ವಾ ಅನ್ನೋದು ಸಧ್ಯ ಪ್ರಶ್ನೆಯಾಗಿಯೇ ಉಳಿದಿದೆ.




Leave a Reply

Your email address will not be published. Required fields are marked *

error: Content is protected !!