ಡುಪ್ಲಸಿ, ಗಾಯಕ್ವಾಡ್ ಅಬ್ಬರ.. ಕೆಕೆಆರ್ ಗೆ 220 ಟಾರ್ಗೆಟ್

210

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಇಲ್ಲಿನ ವಾಖಂಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕೊತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಎಂ.ಎಸ್ ಧೋನಿ ಟೀಂ ಭರ್ಜರಿ ಬ್ಯಾಟಿಂಗ್ ಮಾಡಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಲೆಕ್ಕಾಚಾರ ಉಲ್ಟಾ ಆಗಿದೆ.

ರುತುರಾಜ ಗಾಯಕ್ವಾಡ್ 64, ಫಾಫ್ ಡುಪ್ಲಸಿ 95 ರನ್ ಗಳಿಸಿ ನಾಟೌಟ್ ಆಗಿ ಉಳಿದ. ಕೇವಲ 5 ರನ್ ಗಳಿಂದ ಡುಪ್ಲಿಸಿ ಶತಕ ವಂಚಿತನಾದ. ಜಡೇಜಾ 6 ರನ್ ಗಳಿಸಿ. ಸಿಎಸ್ಕೆ ಅಂತಿಮವಾಗಿ 3 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಬಿಗ್ ಟಾರ್ಗೆಟ್ ನೀಡಿದೆ. ಕೆಕೆಆರ್ ಪರ ವರುಣ ಚಕ್ರವರ್ತಿ, ಸುನೀಲ ನರೈನ್ ಹಾಗೂ ಆಂಡ್ರೋ ರಸಲ್ ತಲಾ 1 ವಿಕೆಟ್ ಪಡೆದರು.

ಈಗಾಗ್ಲೇ ಕೆಕೆಆರ್ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋತು 1ರಲ್ಲಿ ಗೆಲುವು ದಾಖಲಿಸಿದೆ. ಸಿಎಸ್ಕೆ 2 ಗೆದ್ದು 1ರಲ್ಲಿ ಸೋತಿದೆ. ಇದೀಗ ಇಯಾನ್ ಮಾರ್ಗನ್ ಟೀಂ ಬಿಗ್ ಸ್ಕೋರ್ ಚೇಸ್ ಮಾಡುವ ಚಾಲೆಂಜ್ ಇದ್ದು, ಹೇಗೆ ನಿಭಾಯಿಸುತ್ತೆ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!