ಸಿಡಬ್ಲುಸಿ ಸಭೆ: ಮನೆಯೊಂದು ಮೂರು ಬಾಗಿಲಾದ ಕಾಂಗ್ರೆಸ್!

296

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಶತಮಾನ ಮೀರಿದ ಕಾಂಗ್ರೆಸ್ ಪಕ್ಷದಲ್ಲೀಗ ಭಿನ್ನಮತ ಸ್ಫೋಟಗೊಂಡಿದೆ. ಎಐಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಕರೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿನ ಮಾತುಗಳು, ಹಿರಿಯ ನಾಯಕರು ಹಾಗೂ ಕಿರಿಯ ರಾಹುಲ ಗಾಂಧಿ ನಡುವಿನ ಗುದ್ದಾಟಕ್ಕೆ ಕಾರಣವಾಗಿ, ಮತ್ತೆ ತ್ಯಾಪೆಹಚ್ಚಿ ಸರಿಪಡಿಸಲಾಗಿದೆ.

ಗಾಂಧಿ ಕುಟುಂಬ ಹೊರತು ಪಡಿಸಿದವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡಿ ಎಂದು ಒಂದು ಟೀಂ, ರಾಹುಲ ಗಾಂಧಿ ಮುಂದುವರೆಯಲಿ ಅನ್ನೋದು ಮತ್ತೊಂದು ಟೀಂ, ಸೋನಿಯಾ ಗಾಂಧಿ ಮೇಲೆ ಮುನಿಸಿಕೊಂಡಿರುವ ಮಗದೊಂದು ಟೀಂ.. ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಹುಲ ಹೇಳಿದ್ದಾರೆ ಎಂದು, ಹಿರಿಯರಾದ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ರಾಜೀನಾಮೆ ನೀಡುವ ಟ್ವೀಟ್ ಮಾಡಿ ಆಂತರಿಕ ಬಿರುಗಾಳಿಗೆ ಕಾರಣರಾದ್ರು. ರಾಹುಲ ಹಾಗೇ ಹೇಳಿಲ್ಲ. ತಪ್ಪು ಮಾಹಿತಿ ಎಂದು ಹೇಳಿ ಟ್ವೀಟ್ ಅಳಿಸಿಹಾಕಿದ್ರು. ತಮ್ಮ ಮಾತನ್ನ ವಾಪಸ್ ಪಡೆದ್ರು.

ಮಲ್ಲಿಕಾರ್ಜುನ ಖರ್ಗೆ, ಅಶೋಕ ಗೆಹ್ಲೋಟ್, ಸುಶೀಲಕುಮಾರ ಶಿಂಧೆ, ಶಶಿ ತರೂರ್, ಮುಕಲ್ ವಾಸ್ನಿಕ್ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರ್ತಿವೆ. ಇನ್ನೊಂದ್ಕಡೆ ರಾಹುಲ ಗಾಂಧಿ ಅಧ್ಯಕ್ಷರಾಗಲಿ ಅಂತಿದೆ. ದೇಶದ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ನಲ್ಲಿನ ಭಿನ್ನಮತ ಶಮನಗೊಳಿಸುವಲ್ಲಿ ಯಶಸ್ವಿಯಾದ ರಾಷ್ಟ್ರೀಯ ನಾಯಕರೆ ಇಂದು ರಾಜೀನಾಮೆ ಕೊಡುವ ಮಟ್ಟಕ್ಕೆ ಬಂದಿರುವುದು ಕಾಂಗ್ರೆಸ್ ಗೆ ನಿಜಕ್ಕೂ ಆಘಾತದ ಸಂಗತಿ. ನೆಹರು ಯುಗದಿಂದ ಶುರುವಾಗಿ ಸೋನಿಯಾ-ರಾಹುಲವರೆಗೂ ಗಾಂಧಿ ಕುಟುಂಬದಲ್ಲಿಯೇ ಸುಳಿದಾಡ್ತಿರುವ ಎಐಸಿಸಿ ಪಟ್ಟಕ್ಕೆ ಹೊಸ ಮುಖ ಬೇಕು ಎನ್ನಲಾಗ್ತಿದೆ.

17 ವರ್ಷ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ, ರಾಹುಲ ರಾಜೀನಾಮೆ ಬಳಿಕ ಹಂಗಾಮಿ ಅಧ್ಯಕ್ಷರಾದ್ರು. ಆಗ್ಲೂ ಸಹ ಇದೆ ಸಮಸ್ಯೆ ಶುರುವಾಯ್ತು. ಇಷ್ಟು ವರ್ಷಕ್ಕೆ ಪಕ್ಷಕ್ಕಾಗಿ ದುಡಿದ ಗಾಂಧಿಯೇತರ ಕುಟುಂಬದ ನಾಯಕರಿಗೆ ಎಐಸಿಸಿ ಜವಾಬ್ದಾರಿ ಕೊಡುವಲ್ಲಿ ಆಗ್ತಿರುವ ಜಟಾಪಟಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಹೊಡೆತವಿದೆ. ಈಗಾಗ್ಲೇ ಕಾಂಗ್ರೆಸ್ ತನ್ನ ಹಳೆಯ ವರ್ಚಸ್ ಕಳೆದುಕೊಳ್ತಿದ್ದು, ಓವೈಸಿ ಬೇರೆ ಮುಸ್ಲಿಂರನ್ನ ಕಾಂಗ್ರೆಸ್ ನಿಂದ ದೂರ ಮಾಡಲು ನೋಡ್ತಿದ್ದಾರೆ. ನಿನ್ನೆ ಮೊನ್ನೆ ಬಂದ ರಮ್ಯಾನಂತವರು ಹಿರಿಯ ನಾಯಕರಿಗೆ ಟಾಂಗ್ ಕೊಡುವ ಕೆಲಸ ಮಾಡ್ತಿರುವುದು ಶತಮಾನದ ಪಕ್ಷಕ್ಕೆ ಮುಳ್ಳಾಗುವ ಸಾಧ್ಯತೆ ಹೆಚ್ಚು. ಪ್ರತಿಷ್ಠತೆಯನ್ನ ಪಕ್ಕಕ್ಕೆ ಇಟ್ಟು ಗಾಂಧಿ ಕುಟುಂಬ ಹೊರತು ಪಡಿಸಿದವರನ್ನ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!