ನಿರ್ದೇಶಕ ಆರ್ ಜಿವಿ ನಟಿಯೊಂದಿಗೆ ಹೀಗೇಕೆ ನಡೆದುಕೊಂಡರು?

234

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ ನಿರ್ದೇಶಕರಲ್ಲಿ ರಾಮ್ ಗೋಪಾಲ್ ವರ್ಮಾ ಸಹ ಒಬ್ಬರು. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ವರ್ಮಾ ಅನೇಕರಿಗೆ ಸ್ಪೂರ್ತಿ. ಜೊತೆಗೆ ಸದಾ ವಿವಾದಾತ್ಮಕ ವಿಷಯಗಳಿಂದಲೂ ಚರ್ಚೆಯಲ್ಲಿರುತ್ತಾರೆ. ಈಗ ನಟಿಯೊಂದಿಗೆ ನಡೆದುಕೊಂಡ ರೀತಿಯಿಂದಾಗಿ ಚರ್ಚೆಗೆ ಬಂದಿದ್ದಾರೆ.

ಯೆಸ್, ವರ್ಮಾ ನಿರ್ದೇಶನದ ಡೇಂಜರ್ಸ್ ಮೂವಿ ಡಿಸೆಂಬರ್ 8 ಶುಕ್ರವಾರ ರಿಲೀಸ್ ಆಗುತ್ತಿದೆ. ಮಹಿಳಾ ಸಲಿಂಗಕಾಮದ ಕುರಿತು ಮಾಡಿದ ಮೊದಲ ಭಾರತೀಯ ಸಿನಿಮಾ ಎಂದು ಹೇಳಬಹುದು. ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಕುರಿತು ನಟಿ ಐಶುರೆಡ್ಡಿ ಜೊತೆಗೆ ಸಂದರ್ಶನ ರೂಪದ ಮಾತುಕತೆಯ ವೇಳೆ ಸ್ಟಾರ್ ನಿರ್ದೇಶಕ ನಡೆದುಕೊಂಡ ರೀತಿ ಅಚ್ಚರಿ ಮೂಡಿಸಿದೆ. ಕಳೆದ ರಾತ್ರಿ 9.30ಕ್ಕೆ ಇದನ್ನು ಯುಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ. ಡೇಂಜರ್ಸ್ ಆರ್ ಜಿವಿ ವಿತ್ ಡಬಲ್ ಡೇಂಜರ್ಸ್ ಐಶು ಎಂದು ಬರೆದು ಪೋಸ್ಟ್ ಮಾಡಿದ ವಿಡಿಯೋ 1 ಮಿಲಿಯನ್ ಗೂ ಹೆಚ್ಚು ಜನ ನೋಡಿದ್ದಾರೆ. ಒಬ್ಬ ಸ್ಟಾರ್ ನಿರ್ದೇಶಕ ಒಮ್ಮೊಮ್ಮೆ ಯಾಕೆ ರೀತಿ ವರ್ತಿಸುತ್ತಾರೆ ಅನ್ನೋದು ಅವರ ಅಭಿಮಾನಿಗಳಿಗೇ ಶಾಕ್ ಆಗಿದೆ.




Leave a Reply

Your email address will not be published. Required fields are marked *

error: Content is protected !!