ಥಿಯೇಟರ್ ಮಾಲೀಕರಿಂದ ‘ಡೇಂಜರಸ್’ಗೆ ನೋ ಎಂಟ್ರಿ

618

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಂದರೆ ಸಾಕು ಸದಾ ಒಂದಲ್ಲ ವಿವಾದ, ಕಾಂಟ್ರವರ್ಸಿ ಸಿನಿಮಾಗಳ ನಿರ್ದೇಶಕ ಎನ್ನಲಾಗುತ್ತಿದೆ. ಒಂದು ಕಾಲದಲ್ಲಿ ಟ್ರೆಂಡ್ ಸೆಟ್ಟರ್ ನಿರ್ದೇಶಕ ಎನಿಸಿಕೊಂಡಿದ್ದ ವರ್ಮಾ, ವರ್ಷಗಳು ಕಳೆದಂತೆ ಸಂಪೂರ್ಣ ಬದಲಾದರು.

ಇತ್ತೀಚಿನ ವರ್ಷಗಳಲ್ಲಿ ವರ್ಮಾ ನಿರ್ದೇಶನದ ಚಿತ್ರಗಳು ಬರಿ ಹಸಿಬಿಸಿಯಾಗಿರುತ್ತವೆ. ವಿವಾದಿಂದ ಕೂಡಿರುತ್ತವೆ. ಇದೀಗ ಅವರ ಡೇಂಜರಸ್ ಚಿತ್ರಕ್ಕೆ ಥಿಯೇಟರ್ ಮಾಲೀಕರಿಗೆ ನೋ ಎಂಟ್ರಿ ಎಂದು ಹೇಳಿದ್ದಾರೆ.

ಲೆಸ್ಬಿಯನ್ಸ್(ಸಲಿಂಗಪ್ರೇಮಿಗಳು) ಕುರಿತು ಡೇಂಜರಸ್ ಚಿತ್ರವನ್ನು ಮಾಡಿದ್ದಾರೆ. ನಟಿಯರಾದ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ಲೆಸ್ಬಿಯನ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗ್ಲೇ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಹಸಿಬಿಸಿ ದೃಶ್ಯಗಳು ಇರುವುದರಿಂದ, ಚಿತ್ರಮಂದರಿಗಳ ಮಾಲೀಕರು ನೋ ಎಂಟ್ರಿ ಹೇಳಿದ್ದಕ್ಕೆ ಏಪ್ರಿಲ್ 8ರಂದು ರಿಲೀಸ್ ಆಗಬೇಕಿದ್ದ ಚಿತ್ರ ಅನಿರ್ದಿಷ್ಟವಾವಧಿ ಮುಂದೂಡಿದೆ.

ಈ ಬಗ್ಗೆ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ಲೆಸ್ಬಿಯನ್ಸ್ ಕುರಿತು ಈ ಹಿಂದೆ ಹಲವು ಚಿತ್ರಗಳು ಬಂದಿವೆ. ಅವುಗಳಲ್ಲಿ ಅವರನ್ನು ವೀಕ್ ಎಂದು, ಪಾಪದವರೆಂದು ತೋರಿಸಿದ್ದಾರೆ. ನಾನು ಅವರು ಪವರ್ ಫುಲ್ ಎಂದು ಹೇಳಿದ್ದೇನೆ. ಅವರ ಬಗ್ಗೆ ಸಹಿಷ್ಣವಾಗಬೇಕೆಂದು ಈ ಸಿನಿಮಾ ಮಾಡಿದ್ದೇನೆ. ಥಿಯೇಟರ್ ಗಳಲ್ಲಿ ರಿಲೀಸ್ ಮಾಡುವ ಕುರಿತು ಕಾನೂನು ಹೋರಾಟ ಮಾಡುತ್ತೇನೆ. ಯಾಕಂದರೆ, ಸುಪ್ರೀಂಕೋರ್ಟ್ ನಲ್ಲಿ ಸಲಿಂಗಪ್ರೇಮ ಅಪರಾಧವಲ್ಲವೆಂದು ತೀರ್ಪು ಬಂದ ಮೇಲೆಯೇ ಈ ಸಿನಿಮಾ ಮಾಡುವ ಆಲೋಚನೆ ಬಂದಿತ್ತು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!