ಡಿ.5ರಂದು ಕರ್ನಾಟಕ ಬಂದ್.. ರೋಲ್ ಕಾಲ್ ಸರ್ಕಾರ: ಮುಖ್ಯಮಂತ್ರಿ ಚಂದ್ರು

276

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ನವೆಂಬರ್ 30ರೊಳಗೆ ಸಿಎಂ ಬಿಎಸ್ವೈ ಅವರು ಆದೇಶ ಹಿಂಪಡೆಯಬೇಕು. ಇಲ್ಲದೆ ಹೋದ್ರೆ ಡಿಸೆಂಬರ್ 5ರಂದು ಬಂದ್ ಮಾಡಿಯೇ ಸಿದ್ಧವೆಂದು ವಾಟಾಳ್ ನಾಗರಾಜ ಹೇಳಿದ್ದಾರೆ.

ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತ್ನಾಡಿದ ಅವರು, ಬಸವಕಲ್ಯಾಣ ಚುನಾವಣೆಗಾಗಿ ಮರಾಠ ಪ್ರಾಧಿಕಾರ ಮಾಡಲು ಹೊರಟಿದ್ದಾರೆ. ನಮ್ಮ ಹೋರಾಟದ ಬಗ್ಗೆ ಎಷ್ಟು ಬೇಕು ಅಷ್ಟು ಅಪಪ್ರಚಾರ ಮಾಡಿ. ಆದ್ರೆ, ನೀವು ಎಷ್ಟೇ ಮಾಡಿದ್ರೂ ಬಂದ್ ಮಾಡಿಯೇ ತಿರುತ್ತೇವೆ. ಕನ್ನಡಪರ ಸಂಘಟನೆ, ರೈತ ಸಂಘಟನೆ, ವಕೀಲರ ಸಂಘ, ಲಾರಿ, ಓಲಾ, ಉಬರ್ ವಾಹನಗಳ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ.

ಬಸವಕಲ್ಯಾಣದಲ್ಲಿ ಚುನಾವಣೆಯನ್ನ ದೃಷ್ಟಿಯಿಂದ, ಸರ್ವಾಧಿಕಾರಿ ದೋರಣೆಯಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಕಿಡಿ ಕಾರಿದ್ರು. ಹೋರಾಟಗಾರರಿಗೆ ರೋಲ್ ಕಾಲ್ ಅನ್ನೋ ಹಿರಿಯರು ಸಹ ರೋಲ್ ಕಾಲ್ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ರಾಜ್ಯದಲ್ಲಿ ಅನಾವೃಷ್ಠಿ, ಅತೀವೃಷ್ಠಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಕಷ್ಟದಲ್ಲಿದೆ. ಅದನ್ನ ಬಿಟ್ಟು ಮರಾಠ ಅಭಿವೃದ್ಧಿ ಮಂಡಳಿ, ಇದನ್ನ ಮುಚ್ಚಲು ನಿಗಮ ಮಂಡಳಿ ಆಟ ಮಾಡ್ತಿದ್ದಾರೆ ಎಂದು ಕಿಡಿ ಕಾರಿದ್ರು.

ಈ ವೇಳೆ ಹಿರಿಯ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ನಿರ್ಮಾಪಕ ಸಾರಾ ಗೋವಿಂದ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!