ಶಾಂತಿ ನಾಯಕ ಅವರಿಗೆ ದೇಸಿ ಸಮ್ಮಾನ ಪ್ರಶಸ್ತಿ

373

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಸಿಂದಗಿ: ಪಟ್ಟಣದ ನೆಲೆ ಪ್ರಕಾಶನ ಸಂಸ್ಥೆಯ ಎಂ.ಎಂ ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ, ಜಾನಪದ ವಿದ್ವಾಂಸರಿಗೆ ನೀಡುವ ದೇಸಿ ಸಮ್ಮಾನ ಪ್ರಶಸ್ತಿಗೆ ಈ ಬಾರಿ ಹೊನ್ನವಾರದ ಹಿರಿಯ ಜಾನಪದ ವಿದ್ವಾಂಸರಾದ ಶಾಂತಿ ನಾಯಕ ಅವರು ಆಯ್ಕೆ ಆಗಿದ್ದಾರೆ.

ಶಿಕ್ಷಕಿ ವೃತ್ತಿಯ ಜೊತೆಗೆ ಸಾಹಿತ್ಯ ವಲಯದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಶಾಂತಿ ನಾಯಕ ಅವರು ಇದುವರೆಗೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಲೋಕಕ್ಕೆ ಇವರು ನೀಡರುವ ಕೊಡುಗೆಯನ್ನು ಪರಿಗಣಿಸಿ 2023ನೇ ಸಾಲಿನ ದೇಸಿ ಸಮ್ಮಾನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಡಾ.ರಾಮಕೃಷ್ಣ ಮರಾಠೆ, ಡಾ.ವಿಜಯಕುಮಾರ್ ಕಟಗಿಹಳ್ಳಿಮಠ, ಡಾ.ಎಫ್.ಟಿ ಹಳ್ಳಿಕೇರಿ ಇದ್ದಾರೆ.

ನವೆಂಬರ್ 5, 2023ರಂದು ಪಟ್ಟಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 11 ಸಾವಿರ ರೂಪಾಯಿ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಈ ವೇಳೆ ಪ್ರಾಧ್ಯಾಪಕ ನಾಗರಾಜ ಹೆಗಡೆ ಬರೆದ ಶಾಂತಿ ನಾಯಕ: ಬದುಕು ಬರೆಹ ಅನ್ನೋ ಕಿರು ಪುಸ್ತಕವನ್ನು ನೆಲ ಪ್ರಕಾಶನ ಪ್ರಕಟಿಸಿ ಬಿಡುಗಡೆಗೊಳಿಸುತ್ತೆ ಎಂದು ಪ್ರತಿಷ್ಠಾನದ ಸಂಚಾಲಕರು, ಹಿರಿಯ ಕಥೆಗಾರರಾದ ಡಾ.ಚನ್ನಪ್ಪ ಕಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!