ಮಹಿ, ಕೊಹ್ಲಿ ವಿರುದ್ಧ ಯುವಿ ತಂದೆ ಗಂಭೀರ ಆರೋಪ

337

ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ಸ್ಫೋಟಕ ಬ್ಯಾಟ್ಸಮನ್ ಯುವರಾಜ ಸಿಂಗ್ ಅವರ ತಂದೆ, ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಹಾಗೂ ಹಾಲಿ ಕ್ಯಾಪ್ಟನ್ ವಿರಾಟ ಕೊಹ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಮಗನಿಗೆ ಸರಿಯಾದ ಸಮಯದಲ್ಲಿ ಬೆಂಬಲ ನೀಡಲಿಲ್ಲ. ಬಿಸಿಸಿಐ ಆಯ್ಕೆ ಸಮಿತಿಯಲ್ಲಿಯೂ ನನ್ನ ಮಗನಿಗೆ ಅನ್ಯಾಯವಾಗಿದೆ. ಆಯ್ಕೆ ಸಮಿತಿ ಸದಸ್ಯ ಶರಣದೀಪ ಸಿಂಗ್, ಪ್ರತಿಬಾರಿ ನನ್ನ ಮಗನನ್ನ ಆಯ್ಕೆ ಮಾಡಬೇಡಿ ಎಂದು ಹೇಳ್ತಿದ್ರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಮಗ ಒಳ್ಳೆಯ ಪ್ರದರ್ಶನ ನೀಡ್ತಿದ್ದ. ಆದ್ರೂ ಅವರಿಗೆ ಸಮಾಧಾನ ಇರ್ಲಿಲ್ಲ. ಬೇಕಾದವರೆ ಹೀಗೆ ಮೋಸ ಮಾಡಿದ್ರೆ ಬೇಸರವಾಗುತ್ತೆ. ಎಲ್ಲರೂ ಒಂದಲ್ಲ ಒಂದು ದಿನ ವಿದಾಯದ ಪಂದ್ಯ ಆಡಲೇಬೇಕು ಎಂದು ತುಂಬಾ ಬೇಸರದಿಂದ ಸಿಕ್ಸರ್ ಸಿಂಗ್ ಯುವಿ ತಂದೆ ಯೋಗರಾಜ ಸಿಂಗ್ ಹೇಳಿದ್ದಾರೆ.

ಇವತ್ತಿನ ಇಂಡಿಯನ್ ಕ್ರಿಕೆಟ್ ಟೀಂ ಪರಿಸ್ಥಿತಿ ನೋಡಿದ್ರೆ ವಾತಾವರಣ ಸರಿಯಿಲ್ಲ ಅನ್ನೋದು ಸತ್ಯ. ಯುವರಾಜ ಸಿಂಗ್, ಗಂಭೀರ, ಸೆಹ್ವಾಗ್, ಜಹೀರ ಖಾನ, ಪಠಾಣ, ಜಾಫರ್, ಮುರುಳಿ ಕಾರ್ತಿಕ ಸೇರಿದಂತೆ ಅನೇಕರು ಸಚಿನ ಬಳಿಕ ನಿವೃತ್ತಿ ಘೋಷಣೆ ಮಾಡಿದ್ರು. ಆದ್ರೆ, ಇವರ್ಯಾರಿಗೂ ಸಚಿನರಂತೆ ಗೌರವಯುತ ಬೀಳ್ಕೊಡುಗೆ ಸಿಗ್ಲಿಲ್ಲ. ಇದಕ್ಕೆ ಬಿಸಿಸಿಐ ಸಹ ಕಾರಣವಾಗಿದೆ.

2011ರ ವರ್ಲ್ಡ್ ಕಪ್ ಭಾರತಕ್ಕೆ ತಂದು ಕೊಡುವವಲ್ಲಿ ಯುವರಾಜ ಸಿಂಗ್ ಪಾತ್ರ ಬಹುದೊಡ್ಡದಿದೆ. ಇಡೀ ಟೂರ್ನಿಯಲ್ಲಿ ಅದ್ಭುತ ಆಲ್ ರೌಂಡರ್ ಆಟವಾಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದೆ ಸಾಕ್ಷಿ. ಇದನ್ನ ಟೀಂ ಇಂಡಿಯಾ, ಬಿಸಿಸಿಐ ನೆನಪಿನಲ್ಲಿ ಇಟ್ಟುಕೊಳ್ಳದೆ ಇರೋದು ಓರ್ವ ತಂದೆಯಾಗಿ ಯೋಗರಾಜ ಸಿಂಗ್ ಅವರಿಗೆ ಬೇಸರವಾಗಿರುವುದರಲ್ಲಿ ತಪ್ಪೇನಿಲ್ಲ.




Leave a Reply

Your email address will not be published. Required fields are marked *

error: Content is protected !!