ಸಿಎಸ್ಕೆ ಅಭಿಮಾನಿಯ ಪ್ರೀತಿಗೆ ಮಹಿ ಹೇಳಿದ್ದೇನು?

315

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ಕ್ರಿಕೆಟ್ ಟೀಂನ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಐಪಿಎಲ್ ನಲ್ಲಿ ಸಿಎಸ್ಕೆ ಕ್ಯಾಪ್ಟನ್ ಆಗಿರುವ ಧೋನಿಗೆ, ಇತರೆ ರಾಜ್ಯಗಳ ಫ್ಯಾನ್ಸ್ ಸಪೋರ್ಟ್ ಸಹ ಇದೆ. ಹೀಗಾಗಿ ಧೋನಿ ಅಂದ್ರೆ ಅನೇಕರಿಗೆ ತುಂಬಾ ಪ್ರೀತಿ.

ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ನಿಂದಲೇ ಹೊರ ಬಿದ್ದಿದೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ಧೋನಿ ಹಾಗೂ ಟೀಂ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಧೋನಿ ಹಾಗೂ ಸಿಎಸ್ಕೆ ಅಭಿಮಾನಿಯಾಗಿರುವ ಗೋಬಿಕೃಷ್ಣ ತನ್ನ ಇಡೀ ಮನೆಯನ್ನ ಸಿಎಸ್ ಕೆ ಜರ್ಸಿಯ ಕಲರ್ ಹಾಗೂ ಧೋನಿ ಫೋಟೋದಿಂದ ತುಂಬಿದ್ದಾನೆ.

ಈ ಬಗ್ಗೆ ಮಾತ್ನಾಡಿರುವ ಮಹಿ, ಇನ್ಸಾಟಾಗ್ರಾಮ್ ನಲ್ಲಿ ನಾನೊಂದು ಪೋಸ್ಟ್ ನೋಡಿದೆ. ನಿಜಕ್ಕೂ ಅದ್ಭುತ ಚಿತ್ರಣ. ಇದು ಬರೀ ನನ್ಗೆ ಮಾತ್ರವಲ್ಲ. ಸಿಎಸ್ಕೆಯ ದೊಡ್ಡ ಅಭಿಮಾನಿ ಅನ್ನೋದು ತೋರಿಸುತ್ತೆ. ಎಲ್ಲರೂ ನನ್ನ ಬಗ್ಗೆ ಆಗ್ಲಿ, ಸಿಎಸ್ಕೆ ಬಗ್ಗೆ ಆಗ್ಲಿ ಏನು ಮಾತ್ನಾಡ್ತಿದ್ದಾರೆ ಗೊತ್ತು. ಸೋಷಿಯಲ್ ಮೀಡಿಯಾದಲ್ಲಿ ಬರೆಯುವ ಪೋಸ್ಟ್ ರಾತ್ರಿ ಕಳೆಯುವಷ್ಟರಲ್ಲಿ ಅಳಿಸಬಹುದು. ಆದ್ರೆ, ಇದು ಹಾಗಲ್ಲ. ಸಿಎಸ್ಕೆ ಬೆಂಬಲಕ್ಕೆ ನಿಂತ ಅವರ ಇಡೀ ಕುಟುಂಬಕ್ಕೆ ಧನ್ಯವಾದಗಳು ಎಂದು ಧೋನಿ ಹೇಳಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!