ಧೋನಿ ನಿರ್ಮಾಣದ ಮೊದಲ ಚಿತ್ರದ ಟೀಸರ್ ಔಟ್

130

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ನಾಯಕ, ಕೋಟ್ಯಾಂತರ ಅಭಿಮಾನಿಗಳ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಿರ್ಮಾನದ ಮೊದಲ ಚಿತ್ರದ ಟೀಸರ್ ಔಟ್ ಆಗಿದೆ. ಹೌದು, ಲೆಟ್ಸ್ ಗೆಟ್ ಮ್ಯಾರೀಡ್ ಅನ್ನೋ ತಮಿಳು ಚಿತ್ರವನ್ನು ಧೋನಿ ನಿರ್ಮಾಣ ಮಾಡುತ್ತಿದ್ದು, ಅದರ ಟೀಸರ್ ಬಿಡುಗಡೆಯಾಗಿದೆ.

ನಟ ಹರೀಶ್ ಕಲ್ಯಾಣ್, ನಟಿ ಇವಾನಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮೇಶ್ ತಮಿಳ್ಮಣಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಶ್ವಜಿತ್ ಸಂಗೀತವಿದೆ. ಪ್ರದೀಪ್ ರಾಗವ್ ಸಂಕಲವಿದೆ. ಒಂದು ನಿಮಿಷದ ಟೀಸರ್ ಚಿತ್ರ ಪ್ರೇಮಿಗಳನ್ನು ಸೆಳೆಯುತ್ತಿದೆ.

ಕ್ರಿಕೆಟ್ ಅಂಗಳದಲ್ಲಿ ಯಶಸ್ವಿಯಾಗಿರುವ ಧೋನಿ, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇಲ್ಲಿ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಚಿತ್ರ ಬಿಡುಗಡೆ ನಂತರ ಇದಕ್ಕೆ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!