ಮದುವೆ ಬಳಿಕ ಒಂದೇ ಚಿತ್ರದಲ್ಲಿ ದೂದ್ ಪೇಡಾ-ಆ್ಯಂಡಿ

354

ನಟ ದಿಗಂತ ಹಾಗೂ ನಟಿ ಐಂದ್ರಿತಾ ರೇ ಮದುವೆಯಾಗಿ ವರ್ಷವಾಗ್ತಾ ಬರ್ತಿದೆ. ಇದೀಗ ಈ ಜೋಡಿ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ತಿದೆ. ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ದೂದ್ ಪೇಡಾ-ಆ್ಯಂಡಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ವಿನಾಯಕ ಕೋಡ್ಸರ ನಿರ್ದೇಶನದ ಚಿತ್ರದಲ್ಲಿ ದಿಗಂತ ಹಾಗೂ ಐಂದ್ರಿತಾ ಕಾಣಿಸಿಕೊಳ್ತಿದ್ದಾರೆ. ಕಾಮಿಡಿ ಕಥೆಯ ಮೂವಿಯಲ್ಲಿ ಅಡಿಕೆ ಬೆಳೆಗಾರನಾಗಿ ನಟ ದಿಗಂತ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ಈ ಚಿತ್ರದ ಶೂಟಿಂಗ್ ಮಲೆನಾಡಿನ ಭಾಗದಲ್ಲಿ ನಡೆಯಲಿದೆ. ಐಂದ್ರಿತಾ ಜೊತೆಗೆ ನಟಿ ರಂಜನಿ ರಾಘವನ್ ಸಹ ಕಾಣಿಸಿಕೊಳ್ತಿದ್ದಾಳೆ.

2009ರಲ್ಲಿ ಮನಸಾರೆ, 2012 ಪಾರಿಜಾತ ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದಾರೆ. ಮದುವೆಯಾದ್ಮೇಲೆ ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡ್ತಿದ್ದು, ಇವರ ಅಭಿಮಾನಿಗಳಿಗೆ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!