ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಇದೀಗ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾಳೆ. ಜಾಮೀನಿಗಾಗಿ ಕಳೆದ ಮೂರು ತಿಂಗಳಿನಿಂದ ಹೈಕೋರ್ಟ್ ನಲ್ಲಿ ಪ್ರಯತ್ನ ಪಟ್ರೂ ಸಾಧ್ಯವಾಗದ ತುಪ್ಪದ ಹುಡ್ಗಿ ಈಗ ಸುಪ್ರೀಂ ಮೆಟ್ಟಿಲೇರಿದ್ದಾರೆ.
ಡ್ರಗ್ಸ್ ಕೇಸ್ ಸಂಬಂಧ ಸೆಪ್ಟೆಂಬರ್ ನಲ್ಲಿಯೇ ಪರಪ್ಪನ ಅಗ್ರಹವಾರ ಜೈಲು ಸೇರಿರುವ ರಾಗಿಣಿ ಹಾಗೂ ಸಂಜನಾ ಜಾಮೀನಿಗಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಅದು ಸಾಧ್ಯವಾಗಿಲ್ಲ. ನವೆಂಬರ್ 3ರಂದು ಹೈಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿಯೂ ಜಾಮೀನು ನಿರಾಕರಿಸಲಾಗಿದೆ.
ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಡಿಸೆಂಬರ್ 4ರಂದು ವಿಚಾರಣೆಗೆ ಬರಲಿದೆ. ಇನ್ನು ಸಂಜನಾ ಗಲ್ರಾನಿ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.