ಜಗತ್ತಿನ ಏಕೈಕ ಒಂಟಿ ಆನೆಗೆ ಕೊನೆಗೂ ಮುಕ್ತಿ

507

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಇಸ್ಲಾಮಾಬಾದ್: ಪಾಕಿಸ್ಥಾನದ ಮೃಗಾಲಯವೊಂದರಲ್ಲಿ ಕಳೆದ 35 ವರ್ಷಗಳಿಂದ ಏಕಾಂಗಿಯಾಗಿ ಜೀವನ ಸಾಗಿಸ್ತಿದ್ದ ಕಾವನ್ ಅನ್ನೋ ಆನೆಗೂ ಕೊನೆಗೂ ಒಂಟಿತನದಿಂದ ಮುಕ್ತಿ ಸಿಕ್ಕಿದೆ. ಅಮೆರಿಕಾದ ಪಾಪ್ ಗಾಯಕಿ ಇದನ್ನ ಕಾಂಬೋಡಿಯಾಗೆ ತೆಗೆದುಕೊಂಡು ಹೋಗ್ತಿದ್ದಾರೆ.

ಅಮೆರಿಕ ಪಾಪ್ ಗಾಯಕಿ ಚೇರ್, ಕಾವನ್ ಅನ್ನೋ ಆನೆಯನ್ನ ಭಾನುವಾರ ಕಾಂಬೋಡಿಯಾಗೆ ತೆಗೆದುಕೊಂಡು ಹೋಗ್ತಿದ್ದಾರೆ. ಶುಕ್ರವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜೊತೆ ಮಾತ್ನಾಡಿದ್ದು ಅವರು ಒಪ್ಪಿಗೆ ನೀಡಿದ್ದಾರೆ. ಇಮ್ರಾನ್ ಖಾನ್ ಹಾಗೂ ಚೇರ್ ಟ್ವೀಟರ್ ಮೂಲಕ ಪರಸ್ಪರ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.

ದಶಕಗಳಿಂದ ಝೂಗೆ ಬರುವ ಪ್ರವಾಸಿಗರನ್ನ ರಂಜಿಸುತ್ತಾ ಬರ್ತಿದ್ದ ಕಾವನ್ ಇದೀಗ ಫ್ರೀ ಆಗ್ತಿದೆ. ಜಗತ್ತಿನಲ್ಲಿಯೇ ಇಷ್ಟೊಂದು ಸುದೀರ್ಘವಾಗಿ ಯಾವೊಂದು ಆನೆಯೂ ಒಂಟಿಯಾಗಿ ಜೀವಿಸಿಲ್ಲ. ಕಾವನ್ ಅನ್ನೋ ಆನೆ ಮಾತ್ರ ಬರೋಬ್ಬರಿ 35 ವರ್ಷಗಳ ಕಾಲ ಏಕಾಂಗಿಯಾಗಿ ಬದುಕಿದೆ.




Leave a Reply

Your email address will not be published. Required fields are marked *

error: Content is protected !!