ದುಬೈನಿಂದ ಮಂಗಳೂರಿಗೆ ಬಂದವರಲ್ಲಿ 20 ಮಂದಿಗೆ ಸೋಂಕು

354

ಮಂಗಳೂರು: ಕಳೆದ ಎರಡು ದಿನಗಳ ಹಿಂದೆ ದುಬೈನಿಂದ ಬಂದವರಲ್ಲಿ ಇದೀಗ ಸೋಂಕು ಪತ್ತೆಯಾಗಿದೆ. ವಿಮಾನ ಏರುವಾಗ ನಡೆಸಿದ ಕ್ಷಿಪ್ರವಾಗಿ ನಡೆಸಿದ್ದ ತಪಾಸಣೆಯಲ್ಲಿ ನೆಗೆಟಿವ್ ಬಂದಿತ್ತು. ಇಲ್ಲಿಗೆ ಬಂದ್ಮೇಲೆ ತಪಾಸಣೆ ನಡೆಸಿದ್ರೆ 20 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನೂ 9 ಮಂದಿ ಶಂಕಿತರಾಗಿದ್ದಾರೆ.

ಕಳೆದ ಬುಧವಾರ ದುಬೈನಿಂದ ಬಂದ 168 ಮಂದಿಯನ್ನ ಕರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಲ್ಲಿ ಎಲ್ಲರದ್ದೂ ನೆಗೆಟಿವ್ ಇದ್ದು, ಇಲ್ಲಿ ಬಂದ್ಮೇಲೆ ಟಿಪಿಸಿಆರ್ ಪರೀಕ್ಷೆಯಲ್ಲಿ 20 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಇವರನ್ನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ 168 ಜನರಲ್ಲಿ 38 ಮಂದಿ ಗರ್ಭಿಣಿಯರು, ಕೆಲ ಹಿರಿಯರು ಹಾಗೂ ಅನಾರೋಗ್ಯಪೀಡಿತರು ಸಹ ಇದ್ದಾರೆ.




Leave a Reply

Your email address will not be published. Required fields are marked *

error: Content is protected !!