ಪುಟ್ಟ ಉಕ್ರೇನ್ ಬೃಹತ್ ಭಾರತಕ್ಕೆ ಅಡುಗೆ ಎಣ್ಣೆ ಸಪ್ಲೈ ಮಾಡುತ್ತೆ…

218

ಪ್ರಜಾಸ್ತ್ರ ವಿಶೇಷ

ಬೆಂಗಳೂರು: ಕಳೆದ 14 ದಿನಗಳಿಂದ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಇದರ ಪರಿಣಾಮ ಭಾರತದ ಮೇಲೂ ಆಗಿದೆ. ಅದರಲ್ಲೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಗಗನಕ್ಕೆ ಏರಿಕೆಯಾಗುತ್ತಿದೆ. ಕಳೆದೊಂದು ದಿನದಲ್ಲಿ ಅಡುಗೆ ಎಣ್ಣೆಯ ಬೆಲೆ ಒಂದು ಕೆಜಿಗೆ 200 ರೂಪಾಯಿ ಹತ್ತಿರ ಬಂದಿದೆ.

2020-21ನೇ ಸಾಲಿನಲ್ಲಿ 135.31 ಲಕ್ಷ ಟನ್ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲಾಗಿದೆ. 2019-20ರಲ್ಲಿ 135.25 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದೆ. 2019ರಲ್ಲಿ 75,625 ಕೋಟಿಯಿಂದ 2021ರಲ್ಲಿ 1,17000 ಕೋಟಿ ತನಕ ಏರಿಕೆಯಾಗಿದೆ ಎಂದು ಎಸ್ಇಎ ವರದಿಯಿಂದ ತಿಳಿದು ಬರುತ್ತೆ.

ಇಂಡೋನೇಷಿಯಾ ಹಾಗೂ ಮಲೇಷಿಯಾ ಭಾರತಕ್ಕೆ ಅತಿ ಹೆಚ್ಚಾಗಿ ಕಚ್ಚಾ ತೈಲವನ್ನು ಪೂರೈಕೆ ಮಾಡುತ್ತವೆ. ಸೂರ್ಯಕಾಂತಿ ಎಣ್ಣೆಯ ಕಚ್ಚಾ ತೈಲವನ್ನು ಬಹುಮುಖ್ಯವಾಗಿ ಉಕ್ರೇನ್, ರಷ್ಯಾ, ಅಂರ್ಜೆಂಟೇನಿಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತೆ. ಅಲ್ಲಿಂದ ಬಂದ ಕಚ್ಚಾ ಎಣ್ಣೆಯಿಂದ ಭಾರತದಲ್ಲಿ ಪ್ರಮುಖ 10 ಕಂಪನಿಗಳು ಅಡುಗೆಗೆ ಬೇಕಾದ ರೀತಿಯಲ್ಲಿ ಎಣ್ಣೆ ತಯಾರಿಸುತ್ತವೆ.

ಈಗ ರಷ್ಯಾ ಹಾಗೂ ಉಕ್ರೇನ್ ನಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅಡುಗೆ ಎಣ್ಣೆ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಸರಿಸುಮಾರು 2 ಕೋಟಿಯಷ್ಟು ಜನಸಂಖ್ಯೆ ಇರುವ ಪುಟ್ಟ ರಾಷ್ಟ್ರ 130 ಕೋಟಿಗೂ ಹೆಚ್ಚು ಇರುವ ಭಾರತಕ್ಕೆ ಸೂರ್ಯಕಾಂತಿ ಎಣ್ಣೆಯನ್ನು ಪೂರೈಕೆ ಮಾಡುತ್ತದೆ ಅಂದರೆ, ನಾವು ಅಗತ್ಯ ವಸ್ತುಗಳ ವಿಚಾರದಲ್ಲಿ ವಿದೇಶದ ಮೇಲೆ ಎಷ್ಟೊಂದು ಅವಲಂಬನೆಯಾಗಿದ್ದೇವೆ ಅನ್ನೋದು ತಿಳಿಯುತ್ತೆ.

ಅಲ್ಲಿನ ಶಿಕ್ಷಣ ಕಡಿಮೆ ವೆಚ್ಚದಲ್ಲಿ ಆಗುತ್ತೆ ಎಂದು ಭಾರತದ ವಿದ್ಯಾರ್ಥಿಗಳು ಹೋಗುವುದು ಒಂದು ಕಡೆಯಾದರೆ, ಸೂರ್ಯಕಾಂತಿ ಎಣ್ಣೆಯನ್ನು ಭಾರತಕ್ಕೆ ಪೂರೈಕೆ ಮಾಡುತ್ತದೆ ಅನ್ನೋದು ಮತ್ತೊಂದು ವಿಚಾರ. ಅಡುಗೆ ಎಣ್ಣೆ ಇಲ್ಲ ಎಂದರೆ ಮನೆಯಲ್ಲಿ ಊಟ, ತಿಂಡಿ ಮಾಡಲು ಸಾಧ್ಯವೇ ಇಲ್ಲ. ಈ ಯುದ್ಧದ ಬಿಸಿ ಭಾರತೀಯರ ಬಡ ಹಾಗೂ ಮಧ್ಯಮ ಜನರ ಜೇಬಿಗೆ ದೊಡ್ಡ ಕತ್ತರಿ ಹಾಕಿದೆ.




Leave a Reply

Your email address will not be published. Required fields are marked *

error: Content is protected !!