ನಿಶ್ಚಿತಾರ್ಥ ದೈಹಿಕ ಸಂಬಂಧ ಬೆಳೆಸಲು ಅನುಮತಿ ಅಲ್ಲ

183

ಪ್ರಜಾಸ್ತ್ರ ಸುದ್ದಿ

ನವದೆಹಲಿ: ನಿಶ್ಚಿತಾರ್ಥ ಅನ್ನೋದು ದೈಹಿಕ ಸಂಬಂಧ ಬೆಳೆಸಲು ಅನುಮತಿ ಅಲ್ಲ. ಹಾಗೆಂದು ಭಾವಿಸಿ, ಬಲವಂತದಿಂದ ವಧುವಿನ ಜೊತೆಗೆ ದೈಹಿಕ ಸಂಬಂಧ ಬೆಳೆಸಿದರೆ ಅದು ಅತ್ಯಾಚಾರವಾಗಲಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಇಂತಹ ಪ್ರಕರಣವೊಂದರಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ ಯುವಕನ ವಿಚಾರಣೆ ವೇಳೆ ಈ ರೀತಿಯಾಗಿ ಹೇಳಿದೆ. ನ್ಯಾಯಮೂರ್ತಿ ಸ್ವರ್ಣಕಾಂತ್ ಶರ್ಮಾ ಅವರು, ನಿಶ್ಚಿತಾರ್ಥ ಎಂದರೆ ಮದುವೆಗೆ ಎರಡು ಕಡೆಯಿಂದ ಒಪ್ಪಿಗೆ ಅನ್ನೋದು ಮಾತ್ರ. ಅದನ್ನೇ ಲೈಂಗಿಕತೆಗೆ ಬಳಸಿಕೊಳ್ಳುವುದು, ಹಕ್ಕು ಸಾಧಿಸುವುದು ಸಾಧ್ಯವಿಲ್ಲ ಎಂದಿದ್ದಾರೆ.

ನಿಶ್ಚಿತಾರ್ಥದ ಬಳಿಕ ಯುವಕನೊಬ್ಬ ಯುವತಿಗೆ ಯಾಮಾರಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಹೇಳಿ ಹಲವು ಬಾರಿ ಆಕೆಯನ್ನು ಬಳಸಿಕೊಂಡಿದ್ದ. ಇದರಿಂದ ಯುವತಿ ಗರ್ಭಿಣಿಯಾಗಿದ್ದಳು. ಕಳೆದ ಜುಲೈ 9ರಂದು ಯವತಿಗೆ ಯುವಕನ ಮನೆಗೆ ಹೋದ ಮೇಲೆ ವಿಚಾರ ತಿಳಿದಿದೆ. ಆಗ ಹುಡುಗನ ಕಡೆಯವರ ಮದುವೆಗೆ ನಿರಾಕರಿಸಿದ್ದಾರೆ. ಹೀಗಾಗಿ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿತ್ತು. ಯುವಕ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!