ಪ್ರಜಾಸ್ತ್ರ ಕ್ರೀಡಾ ಸುದ್ದಿ
ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ಟಿಮ್ ಬ್ರೆಸ್ನಾನ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದು ನಂಬಲು ಕಷ್ಟವಾಗುವಂತಹ ಕಠಿಣ ನಿರ್ಧಾರವಾಗಿದೆ ಎಂದಿದ್ದಾರೆ.
ನಾನು ಹಾಗೂ ನನ್ನ ತಂಡ ನಿಗದಿ ಮಾಡಿರುವ ಮಾನದಂಡಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. 2022ನೇ ವರ್ಷವನ್ನು ನಿಭಾಯಿಸಲು ಸಿದ್ಧನಿದ್ದರೂ ನನ್ನ ದೇಹ ಸ್ಪಂದಿಸುತ್ತಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಆದರೆ, ನಾನು ಪ್ರೀತಿಸುವ ಆಟಕ್ಕಾಗಿ ಹೊಂದಿರುವ ಉತ್ಸಾಹ ಎಂದಿಗೂ ಬಿಡುವುದಿಲ್ಲವೆಂದು ಟಿಮ್ ಬ್ರೆಸ್ನಾನ್ ಹೇಳಿದ್ದಾರೆ.