ಬೆಂಗಳೂರು: ಸಂಜೆಯ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಒಟ್ಟು ಇಂದು 36 ಕೇಸ್ ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ ಇಷ್ಟೊಂದು ಪ್ರಕರಣಗಳು ದಾಖಲಾಗಿದ್ದು, 1092ಕ್ಕೆ ಸೋಂಕಿನ ಸಂಖ್ಯೆ ಏರಿಕೆಯಾಗಿದೆ.
ಬೆಂಗಳುರು ನಗರ 14, ಕಲಬುರಗಿಯಲ್ಲಿ 08, ಹಾಸನ 04, ಶಿವಮೊಗ್ಗ 03, ಮಂಡ್ಯ, ಉಡುಪಿ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಧಾರವಾಡ, ದಾವಣಗೆರೆಯಲ್ಲಿ ತಲಾ 01 ಕೇಸ್ ದಾಖಲಾಗಿವೆ. ಇನ್ನು ರಾಜ್ಯದಲ್ಲಿ ಚಾಲ್ತಿರುವ ಪ್ರಕರಣಗಳ ಸಂಖ್ಯೆ 559 ಆಗಿದೆ.
36 ಜನ ಇದುವರೆಗೂ ಕೋವಿಡ್ 19ಗೆ ಬಲಿಯಾಗಿದ್ದಾರೆ. ಇನ್ನು ವಿಜಯಪುರದಲ್ಲಿ ಇಂದು ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ.