ರಾಜ್ಯದಲ್ಲಿಂದು 143 ಹೊಸ ಸೋಂಕಿತರು

470

ಬೆಂಗಳುರು: ಸಂಜೆಯ ಕರೋನಾ ಹೆಲ್ತ್ ಬುಲೆಟಿನ್ ನಲ್ಲಿ ಮತ್ತೆ 27 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಇಂದು ಒಟ್ಟು 143 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ 1,605ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಮಂಡ್ಯದಲ್ಲಿ 33, ಉಡುಪಿ 26 ಹಾಸನ 13, ಬಳ್ಳಾರಿಯಲ್ಲಿ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಬೆಂಗಳೂರು 6, ಬೆಳಗಾವಿ 9, ದಾವಣಗೆರೆ 3, ಮೈಸೂರು 1, ಉತ್ತರ ಕನ್ನಡ 7, ವಿಜಯಪುರ 1, ದಕ್ಷಿಣ ಕನ್ನಡ 5, ಧಾರವಾಡ 5, ಶಿವಮೊಗ್ಗ 6, ಚಿಕ್ಕಬಳ್ಳಾಪುರ 2, ಗದಗ 2, ತುಮಕೂರು 1, ರಾಯಚೂರು 5, ಕೋಲಾರ 2, ಇತರೆ 5 ಕೇಸ್ ಗಳು ಪತ್ತೆಯಾಗಿವೆ.

ಇಂದು 15 ಜನ ಡಿಸ್ಚಾರ್ಜ್ ಆಗುವ ಮೂಲಕ ಇದುವರೆಗೂ 571 ಜನ ಗುಣಮುಖರಾಗಿದ್ದಾರೆ. ಇನ್ನುಉ 992 ಪ್ರಕರಣಗಳು ಚಾಲ್ತಿಯಲ್ಲಿವೆ. 41 ಜನ ಸಾವನ್ನಪ್ಪಿದ್ದಾರೆ. 9 ಜನ ಐಸಿಯುನಲ್ಲಿದ್ದಾರೆ.  




Leave a Reply

Your email address will not be published. Required fields are marked *

error: Content is protected !!