ಶಾಸಕಿ ಅಮಾನತು: ‘ಕೈ’ ಕೊಟ್ಟು ‘ಕಮಲ’ ಮುಡಿಯುತ್ತಾಳ ಅದಿತಿ?

547

ಲಖನೌ: ಉತ್ತರ ಪ್ರದೇಶದ ರಾಯಬರೇಲಿ ವಿಧಾನಸಭಾ ಕ್ಷೇತ್ರದ ಶಾಸಕಿ ಅದಿತಿ ಸಿಂಗ್ ಅವರನ್ನ, ಅಮಾನತು ಮಾಡಲಾಗಿದೆ.  ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಾಸಕಿ ಅದಿತಿ ಸಿಂಗ್, ಪಕ್ಷದ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಅಮಾನತು ಮಾಡಲಾಗಿದೆ.

ಶಾಸಕಿ ಅದತಿ ಸಿಂಗ್, ಸಿಎಂ ಯೋಗಿ ಆದಿತ್ಯನಾಥರೊಂದಿಗೆ ಸಭೆ ನಡೆಸಿದ್ರು. ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ರು. ಹೀಗಾಗಿ ಮಹಿಳಾ ಘಟಕದ ಪ್ರಿಯದರ್ಶನಿಯ ರಾಷ್ಟ್ರೀಯ ಉಸ್ತುವಾರಿಯಾಗಿರುವ ಅದಿತಿಯನ್ನ ಅಮಾನತು ಮಾಡಲಾಗಿದೆ. ಅಸಲಿಗೆ, ಪ್ರಿಯಾಂಕಾ ವಾದ್ರಾ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಅಮಾನತು ಎನ್ನಲಾಗ್ತಿದೆ.

https://twitter.com/AditiSinghINC/status/1262982053907193867?s=20

ಉತ್ತರ ಪ್ರದೇಶದ ಗಡಿಯಲ್ಲಿ 1 ಸಾವಿರ ಬಸ್ ನಿಲ್ಲಿಸಲಾಗಿದೆ. ಬುಧವಾರ ಸಂಜೆ 4 ಗಂಟೆಯವರೆಗೂ ಅಲ್ಲಿಯೇ ಇರುತ್ತವೆ. ವಲಸೆ ಕಾರ್ಮಿಕರನ್ನ ಕರೆದುಕೊಂಡು ಬನ್ನಿ ಎಂದಿದ್ರು. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್, ಇದೊಂದು ಮೋಸ ಹಾಗೂ ಕ್ರೂರ ಹಾಸ್ಯ ಎಂದಿದ್ರು. ಸಾವಿರ ಬಸ್ ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬಸ್ ಗಳ ನೋಂದಣಿ ಸಂಖ್ಯೆ ನಕಲಿಯಾಗಿವೆ. 297 ಬಸ್ ಗಳು ಸಂಚಾರಕ್ಕೆ ಯೋಗ್ಯವಿಲ್ಲ. 98 ಆಟೋ, 68 ಆಂಬ್ಯುಲೆನ್ಸ್ ಗಳಿಗೆ ಪತ್ರವೇ ಇಲ್ಲವೆಂದು ಟ್ವೀಟ್ ಮಾಡಿದ್ರು. ಇದು ಶಾಸಕಿಗೆ ಮುಳುವಾಯ್ತು ಎಂದು ಹೇಳಲಾಗ್ತಿದೆ.

ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ರ ಇತ್ತೀಚೆಗಿನ ಬೆಳವಣಿಗೆ ನೋಡಿದ್ರೆ, ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರ್ತಾರಾ ಅನ್ನೋ ಅನುಮಾನ ಮೂಡಿದೆ. ಸಿಎಂ ಯೋಗಿ ಆದಿತ್ಯನಾಥ ಬಗ್ಗೆ ಹೊಗಳಿಕೆ. ರಾಜಸ್ಥಾನ ಸಿಎಂ ಶ್ಲಾಘನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಶಾಸಕಿ ವಿರುದ್ಧ ಈಗಾಗ್ಲೇ ಸ್ಪೀಕರ್ ಎದುರು ದೂರೊಂದು ಇದೆ. ಹೀಗಾಗಿ ಶಾಸಕತ್ವವನ್ನು ಅನರ್ಹಗೊಳಿಸಿ ಎಂದು ಕಾಂಗ್ರೆಸ್ ಮನವಿ ಮಾಡಿದೆ.




Leave a Reply

Your email address will not be published. Required fields are marked *

error: Content is protected !!