ಎಂಗೇಜ್ ಆದ ‘ಬಲ್ಲಾಳ’

340

ಟಾಲಿವುಡ್ ಅಂಗಳದ ಖ್ಯಾತ ನಟ ರಾಣಾ ದಗ್ಗುಬಾಟಿ ಎಂಗೇಜ್ ಮಿಂಟ್ ಮಾಡಿಕೊಂಡಿದ್ದಾರೆ. ಬಾಹುಬಲಿಯ ಬಲ್ಲಾಳ ಖ್ಯಾತಿಯ 35 ವರ್ಷದ ನಟ ರಾಣಾ, ಮಿಹಿಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸೈಲೆಂಟ್ ಆಗಿ ನಿಶ್ಚಿತಾರ್ಥ ಮುಗಿದಿದೆ.

ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತಾನು ಮದುವೆಯಾಗುವ ಹುಡ್ಗಿಯ ಫೋಟೋ ಹಾಕಿದ್ರು. ಇದೀಗ ಎಂಗೇಜ್ ಮಿಂಟ್ ಆಗಿರುವ ಫೋಟೋವನ್ನ ಟ್ವೀಟರ್ ನಲ್ಲಿ ಹಾಕಿದ್ದು, ಇಟ್ಸ್ ಅಫೀಸಿಯಲ್ ಎಂದು ಬರೆದಿದ್ದಾರೆ. ಸಿನಿ ರಂಗದ ದಿಗ್ಗಜರು ಹೊಸ ಜೋಡಿಗೆ ಶುಭ ಕೋರಿದ್ದಾರೆ.

ಹೈದ್ರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಮಾತ್ರ ಭಾಗಿಯಾಗಿದ್ರು. ಇನ್ನು ಡಿಸೆಂಬರ್ ನಲ್ಲಿ ಮದ್ವೆ ನಡೆಯಲಿದೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!