ಮಾಜಿ ಡಿಸಿಎಂ ಪರಂಗೆ ಐಟಿ ಶಾಕ್

343

ತುಮಕೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ ಟ್ರಬಲ್ ನಂತರ, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಅವರಿಗೆ ಐಟಿ ಇಲಾಖೆ ಶಾಕ್ ನೀಡಿದೆ. ಡಾ.ಜಿ ಪರಮೇಶ್ವರ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ರೇಡ್ ಮಾಡಲಾಗಿದೆ.

ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಸಿದ್ಧಾರ್ಥ ಕಾಲೇಜ್ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಟೆಕ್ನಿಕಲ್ ಕಾಲೇಜು ಸೇರಿದಂತೆ ಪರಮೇಶ್ವರ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ. ಇನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 6 ಜನ ಅಧಿಕಾರಿಗಳಿಂದ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!