ಮಾಜಿ ಸಚಿವ ಕಿಡ್ನಾಪ್ ಕೇಸ್: ಕಂಪ್ಲೀಟ್ ವಿವರ ಇಲ್ಲಿದೆ

238

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತದೆ. ಹಣಕ್ಕಾಗಿ ಅಪಹರಣ ಮಾಡಿದ್ರೆ ಅಂತಾರೆ. ಕೆಲವರು ಯಾವುದೋ ವೈಯಕ್ತಿಕ ಕಾರಣದಿಂದ ಕಿಡ್ನಾಪ್ ಮಾಡಲಾಗಿತ್ತು ಅಂತಾರೆ. ಇದೆಲ್ಲದರ ನಡುವೆ ಈ ಕೇಸ್ ಇದೀಗ ಕೋಲಾರ ಗ್ರಾಮಾಂತರ ರಾಣೆಗೆ ವರ್ಗವಾಗಿದೆ.

ಅಪಹರಣ ಸ್ಟೋರಿ ಏನು?

ಮಂಗಳವಾರ ಬೆಳ್ಳಂದೂರು ಪೊಲೀಸ್ ಠಾಣೆಗೆ ಕರೆಯೊಂದು ಬರುತ್ತೆ. ಕೆರೆಯ ಬಳಿ ಬಿಳಿ ಬಣ್ಣದ ಕಾರ್ ನಿಂತಿರುವ ಮಾಹಿತಿ ನೀಡಲಾಗುತ್ತೆ. ಪೊಲೀಸರು ಅಲ್ಲಿಗೆ ಹೋಗಿ ಕಾರು ಪರಿಶೀಲನೆ ಮಾಡಿದಾಗ ಅದರಲ್ಲಿ ಖಾರದ ಪುಡಿ ಪತ್ತೆಯಾಗಿದೆ. ಕಾರ್ ಮಾಹಿತಿ ಪಡೆದಾಗ ಮಧ್ಯಾಹ್ನದ ವೇಳೆಗೆ ಅದು ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶಗೆ ಸೇರಿದು ಅನ್ನೋದು ತಿಳಿಯುತ್ತೆ.

ಕೋಲಾರದಿಂದ ಮದುವೆಗೆ ಹೋಗುವಾಗ ಎರಡು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಣ ಮಾಡಿದ್ರಂತೆ. ಅವರ ಮಾಹಿತಿ ಪ್ರಕಾರ ಸಂಜೆ 7.30 ಕಿಡ್ನಾಪ್ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಕೋಲಾರ, ಮುಳಬಾಗಿಲು, ಅಂತರಗಂಗೆ, ನರಸಾಪುರ, ಕೈವಾರ, ಮುರುಗುಮುಲ್ಲ ಸೇರಿದಂತೆ ಹಲವು ಕಡೆ ಸುತ್ತಾಡಿಸಿದ್ದಾರಂತೆ.

ಕೋಟಿಗಟ್ಟಲೇ ಹಣಕ್ಕೆ ಬೇಡಿಕೆ ಇಟ್ಟದ್ದ ಅಪಹರಣಕಾರರು ನಂದಗುಡಿ ಹತ್ತಿರದ ಶಿವನಾಪುರ ಬಳಿ ಬಿಟ್ಟು ಹೋಗಿದ್ದಾರೆ. ಇವರು ಕೆ.ಆರ್ ಪುರಂ ಮೂಲಕ ಮನೆ ಸೇರಿದ್ದೇನೆ ಎಂದು ಪೊಲೀಸರ ಎದುರು ಮಾಹಿತಿ ನೀಡಿದ್ದಾರೆ. ಕಿಡ್ನಾಪರ್ಸ್ ಕನ್ನಡ, ತಮಿಳು ಮಾತ್ನಾಡ್ತಿದ್ರಂತೆ. ಇಡೀ ಘಟನೆ ಕೋಲಾರ ಸುತ್ತಮುತ್ತ ನಡೆದಿರುವುದ್ರಿಂದ ಕೋರ್ಟ್ ಅನುಮತಿ ಪಡೆದು ಕೋಲಾರ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾಯಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!