ಭೂಸನೂರ ದ್ವೇಷದ ಹೇಳಿಕೆಗೆ ಮನಗೂಳಿ ತಿರುಗೇಟು

239

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಶಾಸಕ ಅಶೋಕ ಮನಗೂಳಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿನ ಯೋಜನೆಗಳನ್ನು ರದ್ದು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಶಾಸಕ ರಮೇಶ ಭೂಸನೂರ ಹೇಳಿಕೆಗೆ, ಶಾಸಕ ಮನಗೂಳಿ ಗುರುವಾರ ತಿರುಗೇಟು ನೀಡಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಮನೆತನದಲ್ಲಿಯೇ ದ್ವೇಷದ ರಾಜಕಾರಣವಿಲ್ಲ. ಕುತಂತ್ರದ ರಾಜಕಾರಣ ಯಾರು ಮಾಡಿದ್ದಾರೆ ಎಂದು ಜನರಿಗೆ ಬಿಟ್ಟಿದ್ದು, ನಾವು ಅಭಿವೃದ್ಧಿ ಪರ ಎಂದು ವಾಗ್ದಾಳಿ ನಡೆಸಿದರು. ಸರ್ಕಾರದ ಗ್ಯಾರೆಂಟಿಗಳಿಂದ ಜನರು ಸಂತೋಷವಾಗಿದ್ದಾರೆ. ಅವರ ಬಳಿ ಹೋಗಿ ಕೇಳಿ.

ಹಂದಿಗನೂರ ಸಿದ್ರಾಮಪ್ಪ ಹಾಗೂ ಶಿಕ್ಷಕರ ಭವನ ಶೀಘ್ರದಲ್ಲಿ ನಿರ್ಮಾಣ ಮಾಡುತ್ತೇವೆ. 50 ಲಕ್ಷ ರೂಪಾಯಿ ಅನುದಾನದಲ್ಲಿ ಭವನ ನಿರ್ಮಾಣವಾಗಲ್ಲ. ತಾಲೂಕಿನಲ್ಲಿ 18,062 ಶಿಕ್ಷಕರಿದ್ದಾರೆ. 33X35 ಅಡಿಯಲ್ಲಿ ಶಿಕ್ಷಕರ ಭವನ ನಿರ್ಮಾಣ ಹೇಗೆ ಮಾಡ್ತಾರೆ. ಇದರಲ್ಲಿ 20 ಅಡಿ ವೇದಿಕೆ, ಒಂದು ರೂಮ್ ಮಾಡಿದರೆ 40-50 ಶಿಕ್ಷಕರು ಕುಳಿತುಕೊಳ್ಳುತ್ತಾರೆ. ಕನಿಷ್ಟ 500-1000 ಶಿಕ್ಷಕರು ಕುಳಿತುಕೊಳ್ಳುವ ಭವನ ಮಾಡುತ್ತಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಕನಕ ಭವನಗಳನ್ನು ನಿರ್ಮಿಸುತ್ತೇವೆ ಎಂದರು ಅದು ಆಗಲಿಲ್ಲ. ಸುಮ್ಮನೆ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸಬಾರದು ಎಂದರು.

ಪುರಸಭೆಯ 500 ಮನೆಗಳ ಫಲಾನುಭವಿಗಳ ಹೆಸರನ್ನು ರದ್ದು ಮಾಡಿದ್ದೇವೆ ಎಂದಿದ್ದಾರೆ. ಅಧಿಕಾರಿಗಳೇ 190 ಅರ್ಹರಿದ್ದು, 310 ಅನರ್ಹರು ಎಂದು ಎಸಿಗೆ ಪತ್ರ ಬರೆದಿದ್ದಾರೆ. ಯಾವುದೇ ನಿಗಮಗಳಿಗೆ ಪತ್ರ ಬರೆದಿದ್ದರೆ ತೋರಿಸಲಿ. 41 ಕಾಮಗಾರಿಗೆ 96 ಲಕ್ಷ ರೂಪಾಯಿ ಅಂದರೆ ಹೇಗೆ ಸಾಧ್ಯ. ಅಧಿಕಾರಿಗಳೆ ಕೆಲಸ ಸಾಧ್ಯವಿಲ್ಲ ಅಂತಿದ್ದಾರೆ. ಹೀಗಾಗಿ ಚೇಂಜ್ ಆಫ್ ಆರ್ಡರ್ ಮಾಡಿದ್ದೇವೆ. ರದ್ದುಗೊಳಿಸಿಲ್ಲ. ಒಂದೇ ಒಂದು ಪತ್ರ ತೋರಿಸಲಿ. ಇದು ಅವರಿಗೆ ಬಹಿರಂಗ ಸವಾಲು. ಅವರ ಅವಧಿಯಲ್ಲಿ ದಿನಾಂಕ ಇಲ್ಲದೆ ಪತ್ರಗಳು ಹೋಗಿವೆ. ಒಂದೂ ಮಂಜೂರಾಗಿಲ್ಲ. ಅನುದಾನ ರಹಿತ ಆದೇಶ ಪತ್ರ ತೋರಿಸಿದ್ದಾರೆ. ಪರಶುರಾಮ ಮಾದಾರ ಆಗಸ್ಟ್ 30ರ ರಾತ್ರಿ 10.20ಕ್ಕೆ ಆಸ್ಪತ್ರೆಗೆ ಸೇರಿದ್ದಾನೆ. ಪೊಲೀಸರ ಹೇಳಿಕೆ ಪ್ರಕಾರ ಆತ ಎದ್ದು ಕುಳಿತುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ರಾತ್ರಿ 3.13ಕ್ಕೆ ಸ್ಟೇಟಸ್ ಬಿಟ್ಟಿದ್ದು. ನಿಗಮ ಮಂಡಳಿಗಳಿಗೆ ಪತ್ರ ಕೊಟ್ಟರೆ ಆಗಲ್ಲ. ಮಂಜೂರಾತಿ ಮಾಡಿಸಬೇಕು. ಆತ ಬಿಜೆಪಿ ಕಾರ್ಯಕರ್ತ. ಅಭಿಮಾನ ಇದ್ದರೆ ಮಂಜೂರು ಮಾಡಿಸಬೇಕಿತ್ತು ಎಂದು ಹೇಳುವ ಮೂಲಕ ಮಾಜಿ ಶಾಸಕ ರಮೇಶ ಭೂಸನೂರ ಮಾಡಿದ ಸಾಲು ಸಾಲು ಆರೋಪಗಳಿಗೆ ಶಾಸಕ ಅಶೋಕ ಮನಗೂಳಿ ಪ್ರತ್ಯುತ್ತರ ನೀಡಿದ್ದಾರೆ.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಮಲ್ಲಣ್ಣ ಸಾಲಿ, ರಾಜಶೇಖರ ಕೂಚಬಾಳ, ಮಡು ಸೊನ್ನದ ಸೇರಿದಂತೆ ಇತರರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!