ಯೋಗಾಭ್ಯಾಸದಿಂದ ರೋಗಮುಕ್ತ ಜೀವನ

335

ಶಹಾಪೂರ: ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮನುಷ್ಯ ರೋಗರುಜಿನಗಳಿ೦ದ ಮುಕ್ತಿ ಹೊಂದುತ್ತಾನೆ ಅಂತಾ ದೋರನಹಳ್ಳಿಯ ಸಿದ್ಧಾರೂಢ ಸಂಸ್ಥಾನದ ರಮಾನಂದ ಅವಧೂತ ಶ್ರೀಗಳು ಹೇಳಿದ್ದಾರೆ.

ಶ್ರೀಸ್ವಾಮಿ ವಿವೇಕಾನಂದ ಯುವಕ ಸಂಘ ದೋರನಹಳ್ಳಿ ಮತ್ತು ಶ್ರೀಸ್ವಾಮಿ ವಿವೇಕಾನಂದ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಶಹಾಪುರ ಆಶ್ರಯದಲ್ಲಿ ಇಂದು ದೋರನಹಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮ ನಡೆಸಲಾಯ್ತು.

ಪ್ರಸ್ತುತ ಮನುಷ್ಯ ಯಾಂತ್ರಿಕ ಬದುಕಿನತ್ತ ಸಾಗಿ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಆದ್ದರಿಂದ ದಿನದಲ್ಲಿ ಒಂದು ಗಂಟೆ ಯೋಗಾಭ್ಯಾಸ ಮಾಡುವುದು ಉತ್ತಮ ಎಂದು ಪತಂಜಲಿ ಯೋಗ ಸಮಿತಿಯ ಮುಖ್ಯಸ್ಥರಾದ ಬಸವರಾಜ ಕಡಗಂಚಿ ಸಲಹೆ ನೀಡಿದರು.

ಮನುಷ್ಯ ದೈಹಿಕವಾಗಿ ಕೆಲಸಗಳು ಮಾಡುತ್ತಿಲ್ಲ. ಬೌದ್ಧಿಕವಾಗಿ ಕೆಲಸಗಳು ಜಾಸ್ತಿ ಮಾಡುವುದರಿಂದ ರೋಗಗಳಿಗೆ ಬಹುಬೇಗ ಬಲಿಯಾಗುತ್ತಿದ್ದಾನೆ ಅಂತಾ ಪತಂಜಲಿ ಯೋಗ ಸಮಿತಿಯ ಸದಸ್ಯ ಜಗದೀಶ್ ಹೊನ್ಕಲ್ ಬೇಸರ ವ್ಯಕ್ತಪಡಿಸಿದರು. ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ನಾಳೆ ವಿಶ್ವದೆಲ್ಲೆಡೆ ಸಾಮೂಹಿಕ ಯೋಗಾಚರಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶ್ರೀಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಶಿವರಾಜ್ ಜ೦ಗಳಿ, ಅನುರಾಧಾ ಫಿರಂಗಿ, ಶಾಂತು ತೋಟಿಗೇರ, ಮಹೇಶ್ ರಂಜಿತ್, ದೋರನಹಳ್ಳಿ ಗ್ರಾಮದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


TAG


Leave a Reply

Your email address will not be published. Required fields are marked *

error: Content is protected !!