ವೈಜ್ಞಾನಿಕವಾಗಿ ಯೋಗ ಅಳವಡಿಸಿಕೊಳ್ಳಬೇಕು: ಡಾ.ಈಶ್ವರ ಬಸವರೆಡ್ಡಿ

309

ಪ್ರಜಾಸ್ತ್ರ ಸುದ್ದಿ

ಧಾರವಾಡ: ಯೋಗವನ್ನ ವೈಜ್ಞಾನಿಕವಾದ ರೀತಿಯಲ್ಲಿ ಜೀವನದಲ್ಲಿ ಅಳವಡಿಸಿಕೊಂಡಾಗ ಅದರ ಪರಿಣಾಮ ಹೆಚ್ಚು ಬೀರುತ್ತದೆ ಎಂದು, ಭಾರತ ಸರ್ಕಾರದ ಮೂರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ನಿರ್ದೇಶಕ ಡಾ. ಈಶ್ವರ ಬಸವರೆಡ್ಡಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಯೋಗ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಧಾರವಾಡದ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ, 7ನೇ ಅಂತರಾಷ್ಟ್ರಿಯ ಯೋಗ ದಿನಾಚರಣೆಯ ಅಂಗವಾಗಿ ‘ಆರೋಗ್ಯದಲ್ಲಿ ಯೋಗದ ಮಹತ್ವ’ ಎಂಬ ವಿಷಯದ ಕುರಿತು ಆಯೋಜಿಸಿದ ಒಂದು ವಾರದ ವೆಬಿನಾರ್‌ ನ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

1856ರಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿಕೃಷ್ಣರಾಜರು ಯೋಗಾ ಅಭ್ಯಾಸಕ್ಕೆ ಪ್ರೋತ್ಸಾಹ ನೀಡಿದವರಲ್ಲಿ ಒಬ್ಬರು. 2014ರಲ್ಲಿ ವಿಶ್ವಸಂಸ್ಥೆಯ ಮೂಲಕ ಯೋಗಕ್ಕೆ 177 ರಾಷ್ಟ್ರಗಳು ಯೋಗಕ್ಕೆ ಮಾನ್ಯತೆ ನೀಡಿದ್ದರಿಂದ ಯೋಗ ಇಂದು ಜಾಗತಿಕಮಟ್ಟದಲ್ಲಿ ಹೆಚ್ಚು ಮಹತ್ವ ಪಡಿದಿದೆ. ಮುಂದಿನ ದಿನಗಳಲ್ಲಿ ಕವಿವಿಯ ಯೋಗ ವಿಭಾಗಕ್ಕೆ ಸರ್ಕಾರದ ಮಟ್ಟದಲ್ಲಿ ತರಬೇತಿ, ಕಾರ್ಯಾಗಾರಗಳನ್ನ ಆಯೋಜಿಸಲು ದೆಹಲಿಯ ರಾಷ್ಟ್ರೀಯ ಯೋಗ ಸಂಸ್ಥೆ ಸಹಕಾರ ನೀಡಲು ಸಿದ್ಧ ಎಂದರು.

ಈ ವೇಳೆ ವೆಬಿನಾರ್‌ ನಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಜಗದೀಶ ಜಿ.ಆರ್, ಡಾ.ಸತ್ಯಜೀತ ಕಡಕೋಳ, ಡಾ.ಜ್ಯೋತಿ ಸಾಂಗ್ಲಿ, ವಿನಾಯಕ ತಲಗೇರಿ, ಡಾ.ಪ್ರಭು ಸಂವಾದ ನಡೆಸಿದ್ರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿವಿಯ ಸಮಾಜ ವಿಜ್ಞಾನ ನಿಖಾಯದ ಡೀನ್‌ ಪ್ರೊ.ಶಂಕುತಲಾ ಶೆಟ್ಟರ್ ವಹಿಸಿದ್ರು. ಕವಿವಿಯ ಸಿಂಡಿಕೇಟ್ ಸದಸ್ಯರಾದ ಸುಧೀಂದ್ರ ದೇಶಪಾಂಡೆ, ಎನ್ಎಸ್ಎಸ್ ಕೋಶದ ಸಂಯೋಜಕರಾದ ಡಾ.ಎಂ.ಬಿ ದಳಪತಿ, ಧಾರವಾಡ ನೆಹರು ಯುವ ಕೇಂದ್ರ ಅಧಿಕಾರಿ ಗೌತಮ ರೆಡ್ಡಿ, ಐಟಿ ವಿಭಾಗದ ಸಂಯೋಜಕ ಹರೀಶ ಸೇರಿದಂತೆ ವಿವಿಧ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!