ರೈತರಿಗೆ ಬೆಂಬಲ: 35 ರಾಷ್ಟ್ರೀಯ ಪ್ರಶಸ್ತಿ ಹಿಂದಿರುಗಿಸಲು ಕ್ರೀಡಾಪಟುಗಳು ರೆಡಿ

240

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳ ತಿದ್ದುಪಡಿಯನ್ನ ವಿರೋಧಿಸಿ ರೈತರು ಬೃಹತ್ ಮಟ್ಟದ ಹೋರಾಟ ಮಾಡ್ತಿದ್ದಾರೆ. ಈಗಾಗ್ಲೇ ರಾಷ್ಟ್ರದ ತುಂಬಾ ದೊಡ್ಡ ಆಂದೋಲನವಾಗಿ ಪರಿವರ್ತನೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ನೇಗಿಲಯೋಗಿಗಳ ಕಿಚ್ಚು ಜೋರಾಗಿದೆ.

ಡಿಸೆಂಬರ್ 8ರಂದು ಭಾರತ ಬಂದ್ ಗೆ ಕರೆ ನೀಡಲಾಗಿದ್ದು, ಅನೇಕ ಸಂಘಟನೆಗಳು, ರಾಜಕೀಯ ಪಕ್ಷಗಳು ರೈತರ ಬೆಂಬಲ ನಿಂತಿವೆ. ಇದರ ಜೊತೆಗೆ ಇದೀಗ ಕ್ರೀಡಾಪಟುಗಳು ಸಹ ರೈತರ ಬೆಂಬಲಕ್ಕೆ ಬಂದಿದ್ದಾರೆ. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಕುಸ್ತಿಪಟು ಕರ್ತರ್ ಸಿಂಗ್ ನೇತೃತ್ವದಲ್ಲಿ ಪ್ರಮುಖ ಕ್ರೀಡಾಪಟುಗಳು ಪ್ರಶಸ್ತಿ ವಾಪಸ್ ಗೆ ದೌಡಾಸಿದ್ದಾರೆ.

ರಾಷ್ಟ್ರಪತಿಗಳ ನಿವಾಸಕ್ಕೆ ತೆರಳಲು ಮುಂದಾಗಿದ್ದು ಒಟ್ಟು 35 ರಾಷ್ಟ್ರೀಯ ಪ್ರಶಸ್ತಿಗಳನ್ನ ಹಿಂದಿರುಗಿಸಲು ಕ್ರೀಡಾಪಟುಗಳು ಸಿದ್ಧವಾಗಿದ್ದಾರೆ. ಇದರಲ್ಲಿ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಪಡೆದ ಹಾಕಿ ಆಟಗಾರ ಗುರ್ಮೈಲ್ ಸಿಂಗ್, ಮಾಜಿ ಹಾಕಿ ನಾಯಕ ರಜ್ ಬೀರ್ ಕೌರ್ ಸಹ ಸೇರಿದ್ದಾರೆ.




Leave a Reply

Your email address will not be published. Required fields are marked *

error: Content is protected !!