ಬ್ರೇಕಿಂಗ್ ನ್ಯೂಸ್
Search

ಪತ್ರಕರ್ತರನ್ನ ಗುರುತಿಸದಿರುವುದು ವಿಷಾದನೀಯ: ಪತ್ರಕರ್ತ ಶಾಂತೂ ಹಿರೇಮಠ

314

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪತ್ರಕರ್ತರು ಸಹ ಕರೋನಾ ವಾರಿಯರ್ಸ್ ರೀತಿಯಲ್ಲಿಯೇ ಕೆಲಸ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಆದರೆ, ಅವರನ್ನ ಗುರುತಿಸಿ ಗೌರವಿಸುವ ಕೆಲಸ ಆಗುತ್ತಿಲ್ಲವೆಂದು ಹಿರಿಯ ಪತ್ರಕರ್ತ ಶಾಂತೂ ಹಿರೇಮಠ ವಿಷಾದ ವ್ಯಕ್ತಪಡಿಸಿದ್ರು. ಪಟ್ಟಣದ ಎಲೈಟ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಿ ಅವರು ಮಾತ್ನಾಡಿದ್ರು.

ಕೋವಿಡ್ 19 ವ್ಯಾಪಕವಾಗಿದ್ದ ಸಂದರ್ಭದಲ್ಲಿ ಪತ್ರಕರ್ತರು ಸಹ ಸಾಕಷ್ಟು ಕೆಲಸ ಮಾಡಿದ್ದಾರೆ. ಸರ್ಕಾರ ಗುರುತಿಸಿರುವ ಕರೋನಾ ವಾರಿಯರ್ಸ್ ತಂಡದಲ್ಲಿ ಪತ್ರಕರ್ತರು ಸಹ ಇದ್ದಾರೆ. ಆದ್ರೆ, ಇದುವರೆಗೂ ಅವರನ್ನ ಗೌರವಿಸುವ ಕೆಲಸವಾಗಿಲ್ಲ. ಹೀಗಾಗಿ ಪ್ರತಿಯೊಂದು ಸಂಕಷ್ಟದ ಸಂದರ್ಭದಲ್ಲಿಯೂ ಮುಂದೆ ನಿಂತು ಕೆಲಸ ಮಾಡುವ ಪತ್ರಕರ್ತ ವೃತ್ತಿ ಥ್ಯಾಂಕ್ಸ್ ಲೆಸ್ ಜಾಬ್ ಆಗಿದೆ. ಆದ್ರೆ, ಎಲೈಟ್ ವಿಜ್ಞಾನ ಕಾಲೇಜು ಆಡಳಿತ ಮಂಡಳಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದವರನ್ನ ಗೌರವಿಸಿ ಪ್ರೋತ್ಸಾಹ ನೀಡ್ತಿರುವುದಕ್ಕೆ ಧನ್ಯವಾದಗಳು ಎಂದರು.

ಎಲೈಟ್ ಸಂಸ್ಥೆಯ ಕಾರ್ಯದರ್ಶಿ ಎಂ.ಎಂ ಅಸಂತಪೂರ ಸ್ವಾಗತ ಹಾಗೂ ಪ್ರಸ್ತಾವಿಕ ನುಡಿಗಳನ್ನಾಡಿದ್ರು. ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಅಭಿಪ್ರಾಯ ಹಂಚಿಕೊಂಡರು. ಇನ್ನು ವಿದ್ಯಾರ್ಥಿಗಳಾದ ಶ್ರುತಿ ಮಸಬಿನಾಳ, ಆಯಿಶಾ ಮುಲ್ಲಾ, ಪ್ರಕಾಶ ತಳಕೇರಿ ಮಾತ್ನಾಡಿದ್ರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಪಂಡಿತ ಯಂಪೂರೆ, ಮಲ್ಲಿಕಾರ್ಜುನ ಅಲ್ಲಾಪೂರ, ಸಂತೋಷ ಜಾಲವಾದಿ, ಮಹಿಬೂಬ ಮುಲ್ಲಾ, ಎಂ.ವಿ ಖತೀಬ, ಗುಂಡು ಕುಲಕರ್ಣಿ, ನಿಂಗರಾಜ ಅತ್ನೂರ, ಸಲೀಂ ಮರ್ತೂರ, ರಾಘವೇಂದ್ರ ಭಜಂತ್ರಿ, ಅಶೋಕ ಬಿರಾದರ ಸೇರಿದಂತೆ ಇತರರನ್ನ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮುಸ್ತಾಫಾ ಎಂ. ಅಸಂತಪೂರ, ಉಪನ್ಯಾಸಕರಾದ ಪರಶುರಾಮ ಜಮಾದಾರ, ಅಜೀಜ ನಾಯಕ, ಆಫ್ರಿನಾ ನದಾಫ, ರೇವಣಸಿದ್ಧ ಗುಣಾರಿ, ಸ್ವಾತಿ ಎಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭಾಗ್ಯಶ್ರೀ ಬಮ್ಮನಜೋಗಿ ಸ್ವಾಗತ ಗೀತೆ ಹಾಡಿದರು. ಅಶೋಕ ಬಿರಾದರ ನಿರೂಪಿಸಿದರು. ಪ್ರಾಚಾರ್ಯರಾದ ಐ.ಎ ಜುಮನಾಳ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!