ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದು, ಹಿರಿಯ ಐಪಿಎಸ್ ಅಧಿಕಾರಿಯಿಂದ ಹಿಡಿದು ಕೆಳಹಂತದ ಅಧಿಕಾರಿಗಳು, ರಾಜಕಾರಣಿಗಳು, ಶಿಕ್ಷಕರ ಬಂಧನವಾಗಿದೆ. ಈಗ ಇದೆ ರೀತಿ ಎಫ್ ಡಿಎ ನೇಮಕಾತಿಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.
ಸಂಗೇಶ್ ಎಂಬಾತನಿಂದ 2.10 ಲಕ್ಷ ರೂಪಾಯಿಯನ್ನು ಮೈಸೂರಿನ ಟ್ರಾಫಿಕ್ ಇನ್ಸ್ ಪೆಕ್ಟರ್ ಅಶ್ವಿನಿ ಎಂಬುವರು ಪಡೆದಿದ್ದಾರೆ ಅನ್ನೋದು ಬೆಳಕಿಗೆ ಬಂದಿದೆ. ಅಶ್ವಿನಿ ಹಾಗೂ ಸಂಗಮೇಶ್ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.