ಪ್ರಜಾಸ್ತ್ರ ಸುದ್ದಿ
ನವದೆಹಲಿ: ಖ್ಯಾತ ಉದ್ಯಮಿ ಅದಾನಿ ಹಿಂಡನ್ ಬರ್ಗ್ ವರದಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಒಂದು ವಾರ ಮುಂದೂಡಿದೆ. ಅಕ್ಟೋಬರ್ 20ರಂದು ವಿಚಾರಣೆ ನಡೆಸಲಾಗುವುದು ಎಂದು ಶುಕ್ರವಾರ ತಿಳಿಸಿದೆ. ಅತ್ತ ಅದಾನಿ ಗ್ರೂಪಿನ ಷೇರುಗಳು ಕುಸಿತ ಕಂಡಿವೆ.
ಕಳೆದ ಜನವರಿ 24ರಂದು ಅಮೆರಿಕ ಮೂಲದ ಹಿಂಡನ್ ಬರ್ಗ್ ರಿಸರ್ಚ್, ಅದಾನಿ ಗ್ರೂಪ್ ಮಾರುಕಟ್ಟೆಯಲ್ಲಿ ವಂಚನೆ ನಡೆಸುತ್ತದೆ ಎಂದು ಹೇಳಿದೆ. ಈ ವರದಿ ಬಳಿಕ ವಿಶ್ವದೆಲ್ಲಡೆ ಸಂಚಲನ ಮೂಡಿತು. ಅದಾನಿ ಷೇರು ವ್ಯಾಪಕ ಕುಸಿತ ಕಂಡಿತು. ಈ ಆರೋಪದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮಾರ್ಚ್ ನಲ್ಲಿ ಸೆಬಿಗೆ ಹೇಳಿದೆ. ಹೀಗಾಗಿ 6 ತಜ್ಞರ ಸಮಿತಿ ರಚಿಸಲಾಗಿದೆ.