‘ಮಣ್ಣಿನ ಗಣಪ ವಿಥ್ ಸೆಲ್ಫಿ’ ಫೋಟೋ ಕಳಿಸಿದೆಷ್ಟು ಜನ?

509

ಪ್ರಜಾಸ್ತ್ರ ವೆಬ್ ಪೋರ್ಟಲ್ ನಿಂದ ‘ಮಣ್ಣಿನ ಗಣಪ ವಿಥ್ ಸೆಲ್ಫಿ’ ಅನ್ನೋ ಯೋಚನೆಯೊಂದಿಗೆ, ಓದುಗರಿಂದ ಫೋಟೋಗಳನ್ನ ಕಳಿಸಲು ಹೇಳಲಾಗಿತ್ತು. ಈ ಒಂದು ಕಾರ್ಯಕ್ಕೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ಯುವಕನೊಬ್ಬ ಫೋಟೋ ಕಳಿಸಿದ್ದಾನೆ.

ಇದು ನಮ್ಗೆ ಬಂದಿರುವ ಏಕೈಕ ಫೋಟೋ. ಇದು ನಿಜಕ್ಕೂ ಆತಂಕದ ಸಂಗತಿ. ಯಾಕಂದ್ರೆ, ಸಾವಿರಾರು ಜನಕ್ಕೆ ತಲುಪಿರುವ ವಿಷ್ಯಕ್ಕೆ ಒಬ್ಬರು ಫೋಟೋ ಕಳುಹಿಸಿದ್ದಾರೆ ಅಂದ್ರೆ, ಪಿಒಪಿ ಗಣಪತಿಯಿಂದ ಬಹುತೇಕರು ಹೊರಗೆ ಬಂದಿಲ್ಲ ಅನ್ನೋದು ಸ್ಪಷ್ಟ.

ಮಣ್ಣಿನ ಗಣಪನೊಂದಿಗೆ ನಟರಾಜ ತುಕಾರಾಮ ಜಾಧವ

ಪರಿಸರ ಕಾಳಜಿ ಬರೀ ಸರ್ಕಾರದವರು ಮಾಡಬೇಕು. ಆದೇಶ ಹೊರಡಿಸುವ ಅಧಿಕಾರಿಗಳು ಮಾಡಬೇಕು ಅನ್ನೋದು ಅಲ್ಲ. ನಮ್ಮ ಸುತ್ತಲಿನ ಪರಿಸರ ಕಾಳಜಿ ಪ್ರತಿಯೊಬ್ಬರ ಕರ್ತವ್ಯ. ಅದು ಅವರೆ ಇವರೆ ಮಾಡಬೇಕು ಅನ್ನೋ ಯಾವ ಲಕ್ಷ್ಮಣರೇಖೆಯಿಲ್ಲ. ನಮ್ಮ ನೆಲದ ಮೂಲ ಆಚರಣೆಗಳು ಇರುವುದು ನಿಸರ್ಗದೊಂದಿಗೆ. ನೆಲ, ಜಲ, ಪ್ರಾಣಿ, ಪಕ್ಷಿಗಳನ್ನ ಪೂಜಿಸುತ್ತಾ ಪ್ರಕೃತಿಯನ್ನ ಆರಾಧಿಸುವ ದೇಶವಿದು.

ಹಬ್ಬಗಳು ಯಾವಾಗ ವ್ಯಾಪಾರೀಕರಣವಾದ್ವೋ ಅಂದೆ ಪರಿಸರ ವಿನಾಶಕ್ಕೆ ನಾಂದಿ ಹಾಡಲಾಯ್ತು. ಇನ್ಮುಂದೆಯಾದ್ರೂ ಪಿಒಪಿ ಗಣಪತಿಗಳನ್ನ ಸಂಪೂರ್ಣವಾಗಿ ನಿರ್ಬಂಧಿಸೋಣ. ಅದಕ್ಕೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಸಜ್ಜಾಗಬೇಕಿದೆ. ನಮ್ಮ ಮನವಿಗೆ ಸ್ಪಂದಿಸಿ ಕೆರೂರಿನಿಂದ ಮಣ್ಣಿನ ಗಣಪತಿಯ ಜೊತೆಗೆ ಸೆಲ್ಫಿ ಕಳಿಸಿದ ನಟರಾಜ ತುಕಾರಾಮ ಜಾಧವ ಅವರಿಗೆ ಪ್ರಜಾಸ್ತ್ರ ಬಳಗದಿಂದ ಧನ್ಯವಾದಗಳು.

ಪ್ರಜಾಸ್ತ್ರ ಡೆಸ್ಕ್




Leave a Reply

Your email address will not be published. Required fields are marked *

error: Content is protected !!