ಚಂದ್ರಯಾನ-2 ಲ್ಯಾಂಡಿಂಗ್: ನಾಳೆಯೇ ಪಿಎಂ ಬೆಂಗಳೂರಿಗೆ

353

ಬೆಂಗಳೂರು: ಸೆಪ್ಟೆಂಬರ್ 7ರಂದು ಚಂದ್ರಯಾನ-2 ಲ್ಯಾಂಡ್ ಆಗಲಿದೆ. ಅದನ್ನ ವೀಕ್ಷಣೆ ಮಾಡಲು ಪ್ರಧಾನಿ ಮೋದಿ ಬರ್ತಿದ್ದಾರೆ. ಹೀಗಾಗಿ ಅವರು ಶುಕ್ರವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಲಿದ್ದಾರೆ.

ನಾಳೆ ರಾತ್ರಿ 9.30ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಪಿಎಂ, ನಂತರ 10ಗಂಟೆಯಷ್ಟರಲ್ಲಿ ಇಸ್ರೋದ ಅತಿಥಿ ಗ್ರಹಕ್ಕೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ. ಸೆಪ್ಟೆಂಬರ್ 7ರ ಬೆಳಗಿನ ಜಾವ 1.15ಕ್ಕೆ ಇಸ್ರೋಗೆ ತೆರಳಿ 1.30ರಿಂದ 7ಗಂಟೆಯ ತನಕ ಇಸ್ರೋದಲ್ಲಿ ಪ್ರಧಾನಿ ಮೋದಿ ಇರಲಿದ್ದಾರೆ.

ಬೆಳಗ್ಗೆ 1.55ರ ಟೈಂನಲ್ಲಿ ಚಂದ್ರಯಾನ-2 ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗುವುದನ್ನ ನೋಡಲಿದ್ದಾರೆ. ಪ್ರಧಾನಿ ಮೋದಿ ಜೊತೆ ಬೇರೆ ಬೇರೆ ರಾಜ್ಯಗಳಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಲ್ಯಾಂಡಿಂಗ್ ವಿಕ್ಷಣೆ ಮಾಡಲಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರಿನ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ.ವೈಷ್ಣವಿ ನಾಗರಾಜ ಆಯ್ಕೆಯಾಗಿದ್ದು, ಈ ವಿದ್ಯಾರ್ಥಿನಿ ಸಹ ಲ್ಯಾಂಡಿಂಗ್ ದೃಶ್ಯವನ್ನ ವೀಕ್ಷಣೆ ಮಾಡಲಿದ್ದಾಳೆ.

ವಿದ್ಯಾರ್ಥಿಗಳ ಆಯ್ಕೆ ಹೇಗೆ?

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಶಾದ್ಯಂತ 20 ನಿಮಿಷಗಳ 20 ಪ್ರಶ್ನೆಗಳನ್ನ ಆನ್ ಲೈನ್ ಮೂಲಕ ಇಸ್ರೋ ನಡೆಸಿತ್ತು. ಬರೋಬ್ಬರಿ 50 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ರು. ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಇಬ್ಬರು ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿ ಇಸ್ರೋಗೆ ಆಹ್ವಾನಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!