ಇನ್ಮುಂದೆ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್!

149

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಒಲಿಂಪಿಕ್ಸ್ ಕ್ರೀಡೆ ಅನ್ನೋ ವಿಶ್ವ ಕ್ರೀಡಾ ಜಗತ್ತಿನ ಜಾತ್ರೆ. ಅಲ್ಲೊಂದು ಕ್ರೀಡಾ ಲೋಕವೇ ಅನಾವರಣಗೊಳ್ಳುತ್ತೆ. ಇಂತಹ ಟ್ರೂನಿಯಲ್ಲಿ ಇದುವರೆಗೂ ಕ್ರಿಕೆಟ್ ಸೇರಿ ಹಲವು ಆಟಗಳಿಗೆ ಅವಕಾಶವೇ ಇರಲಿಲ್ಲ. 1990ರಲ್ಲಿ ಫ್ರಾನ್ಸ್ ಹಾಗೂ ಗ್ರೇಟ್ ಬ್ರಿಟನ್ ನಡುವೆ ಏಕೈಕ ಪಂದ್ಯ ನಡೆದಿತ್ತು.

2028ರ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಒಪ್ಪಿಗೆ ಸೂಚಿಸಿದೆ. ಶುಕ್ರವಾರ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಐಒಸಿ ಅಧಿವೇಶನ ಭಾನುವಾರದಿಂದ ನಡೆಯಲಿದೆ. ಈ ವೇಳೆ ಅಂತಿಮ ಮುದ್ರೆ ಬಿದ್ದ ಬಳಿಕ ಕ್ರಿಕೆಟ್ ಪ್ರೇಮಿಗಳಿಗೆ ಮತ್ತಷ್ಟು ಖುಷಿಯಾಗಲಿದೆ.

ಕ್ರಿಕೆಟ್ ಜೊತೆಗೆ ಬೇಸ್ ಬಾಲ್-ಸಾಫ್ಟ್ ಬಾಲ್, ಸ್ಕ್ವಾಷ್, ಫ್ಲಾಗ್ ಫುಟ್ಬಾಲ್, ಲಾಕ್ರೋಸ್ ಒಲಿಂಪಿಕ್ಸ್ ನಲ್ಲಿ ಆಡಲು ಬಯಸಿದ್ದವು. ಇದಕ್ಕೆ ಅನುಮೋದನೆ ಸಿಕ್ಕಿದೆ. 2028ರಲ್ಲಿ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಒಲಿಂಪಿಕ್ಸ್ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!